Sidlaghatta : ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿರುವ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಮೂರನೇ ಶನಿವಾರದ ಅಂಗವಾಗಿ ತಾಲ್ಲೂಕು ಸವಿತಾ ಸಮಾಜ ಸಂಘದ ವತಿಯಿಂದ ವಿಶೇಷ ಪೂಜೆ ಹಾಗೂ ಬೆಳ್ಳಿ ರಥೋತ್ಸವವನ್ನು ಶನಿವಾರ ನಡೆಸಲಾಯಿತು.
In English: The Taluk Savita Samaja Sangha organised a special puja and silver chariot procession at the Sri Kote Anjaneyaswamy temple near Kote Circle in Sidlaghatta, marking the third Sravana Saturday. The Sravana Saturday observance included special decoration, abhisheka and a procession through the town’s main streets accompanied by nadaswara and dolu music.
ಮುಂಜಾನೆಯಿಂದ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಶ್ರಾವಣ ಶನಿವಾರದ ಪ್ರಯುಕ್ತ ದೇವರಿಗೆ ಮಾಡಲಾಗಿದ್ದ ವಿಶೇಷ ಅಲಂಕಾರ ಭಕ್ತರ ಗಮನ ಸೆಳೆಯಿತು. ನಗರದ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.
ಬಳಿಕ ದೇವರ ಬೆಳ್ಳಿ ರಥೋತ್ಸವ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಬೆಳ್ಳಿ ರಥವನ್ನು ಮೆರವಣಿಗೆ ಮಾಡಲಾಯಿತು. ಸವಿತಾ ಸಮಾಜದ ಸದಸ್ಯರು ನಾದಸ್ವರ ಹಾಗೂ ಡೋಲು ವಾದನದ ಮೂಲಕ ಮೆರವಣಿಗೆಗೆ ಮೆರುಗು ನೀಡಿದರು.
ಸವಿತಾ ಸಮಾಜದ ಎಚ್. ನಾರಾಯಣಸ್ವಾಮಿ, ಮಲ್ಲಹಳ್ಳಿ ವೆಂಕಟೇಶ್, ಮುನಿಸ್ವಾಮಿ, ರಾಜಣ್ಣ, ಅನಿಲ್, ಪ್ರತಾಪ್, ರವಿ, ರಾಜಪ್ಪ, ಮುರಳಿ, ವೇಣುಗೋಪಾಲ್, ದೇವರಾಜ್, ಪವನ್ ಹಾಗೂ ಪ್ರಕಾಶ್ ಭಾಗವಹಿಸಿದ್ದರು.

