Home News ಗ್ರಾಮ ಪಂಚಾಯಿತಿ ಬೀಗ ಹೊಡೆದು UPS ಬ್ಯಾಟರಿಗಳ ಕಳವು

ಗ್ರಾಮ ಪಂಚಾಯಿತಿ ಬೀಗ ಹೊಡೆದು UPS ಬ್ಯಾಟರಿಗಳ ಕಳವು

0
Sidlaghatta Mallur Grama Panchayat Office Theft

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ಕಚೇರಿಯ ಬೀಗ ಹೊಡೆದು ಒಳ ನುಗ್ಗಿರುವ ಕಳ್ಳರು CCTV ಕ್ಯಾಮೆರಾದ ಸಂಪರ್ಕ ಕಡಿತಗೊಳಿಸಿ ಸಿಸಿ ಟಿವಿಯ DVR, UPS ಬ್ಯಾಟರಿ, ಇನ್‌ವರ್ಟರ್‌ಗಳನ್ನು ಕದ್ದೊಯ್ದಿದ್ದಾರೆ.

ಶಿಡ್ಲಘಟ್ಟ-ವಿಜಯಪುರ ಮಾರ್ಗದ ಮಳ್ಳೂರು ಹೊರವಲಯದಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ತಡರಾತ್ರಿ ಕಳ್ಳತನ ನಡೆದಿದ್ದು, ಗುರುವಾರ ಬೆಳಗ್ಗೆ ಜವಾನ ಪಂಚಾಯಿತಿಯ ಕಚೇರಿ ಬೀಗ ತೆಗೆಯಲು ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

PDO ಮಮತ ಅವರು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version