Bhaktarahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಮನೆಯೊಂದರ ಫ್ರಿಡ್ಜ್ ಸ್ಫೋಟಗೊಂಡು ಬೆಂಕಿಹೊತ್ತಿಕೊಂಡ ಘಟನೆ ಶನಿವಾರ ನಡೆದಿದೆ.
ವರಲಕ್ಷ್ಮಿ ಎಂಬ ಆಶಾ ಕಾರ್ಯಕರ್ತೆಯ ಮನೆಯಲ್ಲಿ ಗೋಡೆಗೆ ಆನಿಕೊಂಡಿದ್ದ ಫ್ರಿಡ್ಜ್ ಹಿಂಬದಿಯಲ್ಲಿ ಗಾಳಿ ಆಡದೆ ಶಾಖ ಹೆಚ್ಚಾಗಿ ಅದರ ಕಂಪ್ರೆಸರ್ ಸ್ಫೋಟಗೊಂಡಿದೆ. ತಕ್ಷಣವೇ ಅದನ್ನು ಕಂಡವರು ಅಗ್ನಿಶಾಮಕದಳದವರಿಗೆ ಕರೆ ಮಾಡಿದ್ದರಿಂದ ಅವರು ಬಂದು ಬೆಂಕಿಯನ್ನು ನಂದಿಸಿದ್ದಾರೆ. ಯಾರಿಗೂ ತೊಂದರೆಯಾಗಿಲ್ಲ. ಗ್ಯಾಸ್ ಸಿಲಿಂಡರುಗಳಿಗೆ ಬೆಂಕಿ ತಾಕದಿದ್ದುದರಿಂದ ಹೆಚ್ಚಿನ ಅಪಾಯವಾಗಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.