Home News ಪರಿಸರ ಪ್ರೇಮಿ ದಿ.ಸಂತೋಷ್ ಬೆಳ್ಳೂಟಿ ನೆನಪಿನಲ್ಲಿ ಪರಿಸರ ದಿನಾಚರಣೆ

ಪರಿಸರ ಪ್ರೇಮಿ ದಿ.ಸಂತೋಷ್ ಬೆಳ್ಳೂಟಿ ನೆನಪಿನಲ್ಲಿ ಪರಿಸರ ದಿನಾಚರಣೆ

0
Sidlaghatta Hittalahalli Environment Day

Hittalahalli, sidlaghatta : ಪರಿಸರ ಪ್ರೇಮಿ ದಿ.ಸಂತೋಷ್ ಬೆಳ್ಳೂಟಿ ಅವರ ನೆನಪಿನಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ಪ್ರಗತಿಪರ ರೈತ ಹಿತ್ತಲಹಳ್ಳಿ ಸುರೇಶ್ ತಿಳಿಸಿದರು.

ತಾಲ್ಲೂಕಿನ ಹಿತ್ತಲಹಳ್ಳಿ ಬಳಿಯ ಬಸ್ ಡಿಪೋ ಆವರಣದಲ್ಲಿ ಗುರುವಾರ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.

ಪರಿಸರ ಪ್ರೇಮಿ ದಿ.ಸಂತೋಷ್ ಬೆಳ್ಳೂಟಿ ಅವರು ಇಲ್ಲವಾದರೂ ಅವರು ನೆಟ್ಟಿರುವ ಸಾವಿರಾರು ಗಿಡಗಳು ಈ ದಿನ ಮರಗಳಾಗಿ ಜೀವ ಸಂಕುಲಗಳಿಗೆ ಆಶ್ರಯವನ್ನಿತ್ತಿವೆ. ಬೆಳ್ಳೂಟಿ ಗ್ರಾಮದಲ್ಲಿ ಹಸಿರು ಕ್ರಾಂತಿಯನ್ನೇ ನಡೆಸಿದ್ದರು ಸಂತೋಷ್. ರಸ್ತೆ ಬದಿ, ಖಾಲಿ ಜಾಗಗಳಲ್ಲೆಲ್ಲಾ ನಳನಳಿಸುವ ಗಿಡ ಮರಗಳು, ಸ್ಮಶಾನಕ್ಕೆ ಸುಂದರ ರೂಪ ನೀಡಿ ಗಿಡಮರಗಳು ಬೆಳೆಸಿ ಶಾಂತಿಧಾಮವನ್ನಾಗಿಸಿದ್ದರು. ಬೆಳ್ಳೂಟಿ ಕೆರೆಯ ನಡುಮಧ್ಯೆ ಸುಮಾರು ಆರೂವರೆ ಎಕರೆ ಬಂಡ್(ದ್ವೀಪ) ನಿರ್ಮಿಸಿ, ಅದರಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಿಸಿದ್ದರು ಸಂತೋಷ್. ಈಗ ಆ ಮರಗಳು ಅವರ ನೆನಪಾಗಿ ಹಸಿರನ್ನು ಪಸರಿಸುತ್ತಿವೆ ಎಂದರು.

ಡಿಪೋ ವ್ಯವಸ್ಥಾಪಕ ನಾಗೇಶ್, ಹಿತ್ತಲಳ್ಳಿ ಮುನಿರಾಜು, ವಸಂತ್, ಸುನಿಲ್, ಭಾರತಿ, ಅರುಣ, ಬಾಬು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version