Home News ಮಳೆಗೆ ರೈತರು ಬೆಳೆದ ಬೆಳೆ ಸೇರಿದಂತೆ ಕೋಳಿ ಶೆಡ್ ಹಾನಿ

ಮಳೆಗೆ ರೈತರು ಬೆಳೆದ ಬೆಳೆ ಸೇರಿದಂತೆ ಕೋಳಿ ಶೆಡ್ ಹಾನಿ

0
Sidlaghatta Jangamakote Hailstorm Croploss

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ (Jangamakote) ಹೋಬಳಿಯ ವೆಂಕಟಾಪುರ (Venkatapura) ಗ್ರಾಮದಲ್ಲಿ ಶನಿವಾರ ರಾತ್ರಿ ಬಿದ್ದ ಆಲೀಕಲ್ಲು ಮಳೆಗೆ (Hailstorm) ಸಿಲುಕಿ ರೈತರ ಲಕ್ಷಾಂತರ ರೂ ಬಾಳುವ ಬೆಳೆ ನಷ್ಟ (Crop Loss) ಸಂಭವಿಸಿದೆ.

ಶನಿವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಜಂಗಮಕೋಟೆ ಹೋಬಳಿಯ ವೆಂಕಟಾಪುರ ಸೇರಿದಂತೆ ನಾಗಮಂಗಲ ಗ್ರಾಮದ ಬಹುತೇಕ ರೈತರ ಬೆಳೆಗಳು ಹಾಳಾಗಿವೆ. ಹಾಗೆಯೇ ವೆಂಕಟಾಪುರ ಗ್ರಾಮದ ರಾಮಕೃಷ್ಣಪ್ಪ ಎಂಬ ರೈತ ಇತ್ತೀಚೆಗಷ್ಟೇ ನಿರ್ಮಿಸಿದ್ದ ಕೋಳಿ ಶೆಡ್ ಸಂಪೂರ್ಣವಾಗಿ ಬಿದ್ದು ಹೋಗಿದ್ದು ಗಾಯಗೊಂಡಿರುವ ರಾಮಕೃಷ್ಣಪ್ಪ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸಂಬಂಧಪಟ್ಟ ತೋಟಗಾರಿಕೆ ಹಾಗು ಕೃಷಿ ಇಲಾಖೆಯವರು ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗು ಹಸಿರುಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version