
Sidlaghatta : ಶಿಡ್ಲಘಟ್ಟ ನಗರದ ಚಿಂತಾಮಣಿ ರಸ್ತೆಯಲ್ಲಿರುವ ವಾಲ್ಮೀಕಿ ದೇವಸ್ಥಾನದ ಬಳಿ ಶುಕ್ರವಾರ ಮಿನಿಲಾರಿ ಮತ್ತು ಆಲ್ಟೋ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮಹಿಳೆಯ ಮುಖಕ್ಕೆ ಏಟು ಬಿದ್ದಿದೆ.
ಚಿಂತಾಮಣಿ ಕಡೆಯಿಂದ ಬರುತ್ತಿದ್ದ ಮಿನಿ ಲಾರಿಯ ಹಿಂದಿನ ಚಕ್ರ ಕಳಚಿಕೊಂಡು, ಶಿಡ್ಲಘಟ್ಟದ ಕಡೆಯಿಂದ ಬರುತ್ತಿದ್ದ ಆಲ್ಟೋ ಕಾರಿಗೆ ರಭಸವಾಗಿ ಬಡಿದಿದೆ. ಚಕ್ರ ಕಳಚಿದ ಬೀಟ್ ರೂಟ್ ತುಂಬಿಕೊಂಡು ಜಂಗಮಕೋಟೆಗೆ ಹೊರಟಿದ್ದ ಮಿನಿ ಲಾರಿಯು ಮುಗುಚಿಬಿತ್ತು. ಚಕ್ರ ಬಡಿದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡು, ಉಲ್ಟಾ ತಿರುಗಿತ್ತು. ಕಾರಿನಲ್ಲಿದ್ದ ಮಹಿಳೆಗೆ ಏಟು ತಗುಲಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಪೊಲೀಸರು ಭೇಟಿ ನೀಡಿದ್ದರು.