Home News ರೇಷ್ಮೆ ಹುಳು ಸಾಕಣೆ ಮನೆ ಬಳಿ ನಿಲ್ಲಿಸಿದ್ದ ಬೈಕ್‌ ಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ರೇಷ್ಮೆ ಹುಳು ಸಾಕಣೆ ಮನೆ ಬಳಿ ನಿಲ್ಲಿಸಿದ್ದ ಬೈಕ್‌ ಗಳಿಗೆ ಕಿಡಿಗೇಡಿಗಳಿಂದ ಬೆಂಕಿ

0
Sidlaghatta Malamachanahalli Fire incident

Malamachanahalli : ರೇಷ್ಮೆ ಹುಳು ಸಾಕಣೆ ಮನೆಯ ಆವರಣದಲ್ಲಿ ಹಾಗೂ ಅಕ್ಕ ಪಕ್ಕದಲ್ಲಿ ನಿಲ್ಲಿಸಿದ್ದ ಅಣ್ಣ ತಮ್ಮಂದಿರ ಎರಡು ಕುಟುಂಬಗಳಿಗೆ ಸೇರಿದ ಐದು ಬೈಕ್‌ ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ವಿಚಿತ್ರ ಹಾಗೂ ಹಲವು ಅನುಮಾನಗಳನ್ನು ಹುಟ್ಟು ಹಾಕುವಂತ ಘಟನೆ ಮಳಮಾಚನಹಳ್ಳಿಯಲ್ಲಿ ನಡೆದಿದೆ.

ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ಮುನಿರಾಜು ಮತ್ತು ಮೂರ್ತಿ ಅಣ್ಣ ತಮ್ಮಂದಿರಾಗಿದ್ದು ಇವರಿಗೆ ಸೇರಿದ ಐದು ದ್ವಿಚಕ್ರ ವಾಹನಗಳಿಗೆ ಮಂಗಳವಾರ ರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಮೂರ್ತಿ ಮತ್ತು ಮುನಿರಾಜು ಅವರ ವಾಸದ ಮನೆ ಹಾಗೂ ರೇಷ್ಮೆ ಹುಳು ಸಾಕಣೆ ಮನೆಗಳು ಅಕ್ಕ ಪಕ್ಕದಲ್ಲಿದ್ದು ದ್ವಿಚಕ್ರವಾಹನಗಳನ್ನು ಹುಳು ಸಾಕಣೆ ಮನೆಯ ಬಳಿ ನಿಲ್ಲಿಸಲಾಗಿತ್ತು. ಬೆಳಗ್ಗೆ ಎಂದಿನಂತೆ ಎದ್ದು ನೋಡಿದಾಗ ಬೈಕ್‌ಗಳು ಬೆಂಕಿಗೆ ಸುಟ್ಟು ಕರಕಲಾಗಿರುವುದು ಕಂಡು ಬಂದಿದೆ.

ಯಾರು ಯಾಕೆ ಈ ಕೃತ್ಯ ಮಾಡಿದ್ದಾರೆ ಎಂಬುದು ನಿಖರವಾಗಿ ಗೊತ್ತಿಲ್ಲ. ಮುನಿರಾಜು ಪತ್ನಿ ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version