Home News ಶಿಡ್ಲಘಟ್ಟ ನಗರದ ಮಯೂರ ಚಿತ್ರಮಂದಿರ ಸೀಜ್

ಶಿಡ್ಲಘಟ್ಟ ನಗರದ ಮಯೂರ ಚಿತ್ರಮಂದಿರ ಸೀಜ್

0

ಶಿಡ್ಲಘಟ್ಟ ನಗರದ ಮಯೂರ ವೃತ್ತದಲ್ಲಿರುವ, ಮಯೂರ ಚಿತ್ರಮಂದಿರವನ್ನು (Mayura Theatre) ಬೆಂಗಳೂರು ಸಿಟಿ ಸಹಕಾರ ಸಂಘದಿಂದ ಪಡೆದ ಸಾಲವನ್ನು ಮರುಪಾವತಿ ಮಾಡಿಲ್ಲವೆಂದು ನ್ಯಾಯಾಲಯದ ಆದೇಶದಂತೆ ಮಯೂರ ಚಿತ್ರಮಂದಿರವನ್ನು ಶುಕ್ರವಾರ ಸೀಜ್ ಮಾಡಿ, ಬೀಗ ಜಡಿದಿದ್ದಾರೆ.

ನಗರದಲ್ಲಿರುವ ಮಯೂರ ಚಿತ್ರಮಂದಿರದ ನಿರ್ವಹಣೆಗಾಗಿ ಪಡೆದಿದ್ದ ಸಾಲದ ಮೊತ್ತಕ್ಕೆ ಬಡ್ಡಿ ಸೇರಿ 4 ಕೋಟಿ ರೂಪಾಯಿಯಾಗಿದ್ದು, ಸಾಲ ಮರುಪಾವತಿ ಮಾಡಿರಲಿಲ್ಲ.‌ಸಾಕಷ್ಟು ಬಾರಿ ನೊಟೀಸ್ ಜಾರಿ ಮಾಡಿದ್ದರೂ ಮರುಪಾವತಿಯಾಗದ ಕಾರಣ, ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ವಕೀಲರೊಂದಿಗೆ ಬಂದಿದ್ದ ಬ್ಯಾಂಕಿನ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಬ್ಯಾಂಕಿಗೆ ಬೀಗ ಜಡಿದಿದ್ದಾರೆ. ಚಿತ್ರಮಂದಿರದ ಜೊತೆಯಲ್ಲಿ 8 ಅಂಗಡಿಗಳನ್ನೂ ಸೀಜ್ ಮಾಡಿದ್ದಾರೆ.

ಸಾಲ ಮರುಪಾವತಿ ಮಾಡಿದರೆ ಪುನಃ ಬೀಗ ವಾಪಸ್ಸು ನೀಡುವುದಾಗಿ ವ್ಯವಸ್ಥಾಪಕ ಅಪ್ಪಾಜಯ್ಯ ಸಿ.ಎನ್ ಅವರು ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version