Home News SSLC ಫಲಿತಾಂಶ ಪ್ರಕಟ – ರಾಜಿ ಕಲಂದರಿ ತಾಲ್ಲೂಕಿಗೆ ಪ್ರಥಮ

SSLC ಫಲಿತಾಂಶ ಪ್ರಕಟ – ರಾಜಿ ಕಲಂದರಿ ತಾಲ್ಲೂಕಿಗೆ ಪ್ರಥಮ

0
Sidlaghatta Taluk SSLC 2026 Result Toppers

Sidlaghatta : 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಶಿಡ್ಲಘಟ್ಟಕ್ಕೆ ಶೇ 92.39ರಷ್ಟು ಫಲಿತಾಂಶ ಬಂದಿದ್ದು ಕಳೆದ ವರ್ಷಕ್ಕಿಂತಲೂ ಶೇ 23ರಷ್ಟು ಫಲಿತಾಂಶ ಸುಧಾರಿಸಿದ್ದು, ಶಿಕ್ಷಣ ಪ್ರೇಮಿಗಳು, ಪೋಷಕರಲ್ಲಿ ಖುಷಿ ತಂದಿದೆ. ಆದರೆ ಜಿಲ್ಲೆಯಲ್ಲಿ 2ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿರುವುದು ಬೇಸರಕ್ಕೂ ಕಾರಣವಾಗಿದೆ.

ಎಂದಿನಂತೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ಸಂಪ್ರದಾಯ ಎಂಬಂತೆ ಬಾಲಕಿಯರೆ ಫಲಿತಾಂಶದಲ್ಲೂ ಮುಂದಿದ್ದಾರೆ.

ಸರಕಾರಿ ಶಾಲೆಗಳು-ಶೇ92.43ರಷ್ಟು, ಅನಿದಾನಿತ ಶಾಲೆಗಳು- ಶೇ86.93ರಷ್ಟು ಹಾಗೂ ಖಾಸಗಿ ಶಾಲೆಗಳು ಶೇ 94.43ರಷ್ಟು ಫಲಿತಾಂಶ ದಾಖಲಾಗಿದೆ.

ಹನುಮಂತಪುರ ಗೇಟ್‌ ನ ಬಿಜಿಎಸ್ ಶಾಲೆಯ ರಾಜಿ ಕಲಂಧರಿ 621(ಶೇ99.36) ಅಂಕಗಳನ್ನು ಪಡೆದು ಶಿಡ್ಲಘಟ್ಟ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಇದೇ ಶಾಲೆಯ ಕಲಾಶ್ರೀ, ಟಿ.ಡಿ.ಸ್ಮೃತಿ ಹಾಗೂ ಜಂಗಮಕೋಟೆ ಕ್ರಾಸ್‌ ನ ಜ್ಞಾನ ಜ್ಯೋತಿ ಶಾಲೆಯ ನಂದನ್ ಕುಮಾರ್ ತಲಾ 620(ಶೇ99.2)ರಷ್ಟು ಅಂಕಗಳನ್ನು ಪಡೆದು ಮೂವರು ಕೂಡ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇನ್ನು ಬಿಜಿಎಸ್ ಶಾಲೆಯ ಕವನ-619(ಶೇ99) ಅಂಕ ಪಡೆದು ತೃತೀಯ ಸ್ಥಾನ ತನ್ನದಾಗಿಸಿಕೊಂಡಿದ್ದಾಳೆ.

1217 ಬಾಲಕರು, 1256 ಬಾಲಕಿಯರು ಸೇರಿ ಒಟ್ಟು 2472 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸರ್ಕಾರಿ ಶಾಲೆಗಳ 846 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 421 ವಿದ್ಯಾರ್ಥಿಗಳು, ಅನುದಾನ ರಹಿತ ಶಾಲೆಗಳ1205 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದರು.

ಸರ್ಕಾರಿ 6 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಸಾದಲಿ ಸರ್ಕಾರಿ ಪ್ರೌಢಶಾಲೆ, ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆ, ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲೆ, ಅಪ್ಪೇಗೌಡನಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆ, 11ನೇ ಮೈಲಿಗಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪುರಬೈರನಹಳ್ಳಿಯ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯು ಶೇ 100ರಷ್ಟು ಫಲಿತಾಂಶ ದಾಖಲಿಸಿವೆ.

ಅನುದಾನಿತ ಶಾಲೆ ದಿಬ್ಬೂರಹಳ್ಳಿಯ ಶ್ರೀವೆಂಕಟೇಶ್ವರ ಪ್ರೌಢಶಾಲೆಗೂ ಶೇ 100ರಷ್ಟು ಫಲಿಗತಾಂಶ ಬಂದಿದೆ. ಇನ್ನು ಅನುದಾನ ರಹಿತ ಹನುಮಂತಪುರ ಗೇಟ್‌ ನ ಬಿಜಿಎಸ್ ಶಾಲೆ, ಎಚ್.ಕ್ರಾಸ್‌ ನ ಪಂಚಮುಖಿ ಪ್ರೌಢಶಾಲೆ, ಜಂಗಮಕೋಟೆ ಕ್ರಾಸ್‌ ನ ಜ್ಞಾನ ಜ್ಯೋತಿ ಪ್ರೌಢಶಾಲೆ, ನಗರದ ಆಶಾಕಿರಣ ಅಂಧಮಕ್ಕಳ ವಸತಿ ಶಾಲೆ, ಈ ತಿಮ್ಮಸಂದ್ರದ ಸಾಹಿತ್ಯ ಪ್ರೌಢಶಾಲೆ, ಬೂದಾಳದ ರಾಯಲ್ ಪ್ರೌಢಶಾಲೆ, ಜಂಗಮಕೋಟೆಯ ಬಾಲಾಜಿ ವಿದ್ಯಾನಿಕೇತನ ಶಾಲೆ, ನಗರದ ಕ್ರೆಸೆಂಟ್ ಶಾಲೆ, ಪ್ರೆಸಿಡೆನ್ಸಿ ಶಾಲೆ, ಮೇಲೂರಿನ ಸೇಂಟ್ ಥಾಮಸ್ ಶಾಲೆ, ಚಿಕ್ಕದಾಸರಹಳ್ಳಿಯ ಲಕ್ಷ್ಮಿ ವಿದ್ಯಾನಿಕೇತನ ಶಾಲೆ, ಎಚ್.ಕ್ರಾಸ್‌ ನ ಸುಮುಖ ಆಂಗ್ಲ ಪ್ರೌಢಶಾಲೆ, ವಿದ್ಯಾಜ್ಯೋತಿ ಶಾಲೆ, ಕ್ಲಿಫರ್ಡ್ ಶಾಲೆಗಳಿಗೆ ಶೇ 100ರಷ್ಟು ಫಲಿತಾಂಶ ಬಂದಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version