Home News ದಾರಿ ತಪ್ಪಿ ಬಂದ ಜಿಂಕೆ ರಕ್ಷಣೆ: ಯುವಕರಿಂದ ಅರಣ್ಯ ಇಲಾಖೆಗೆ ಹಸ್ತಾಂತರ

ದಾರಿ ತಪ್ಪಿ ಬಂದ ಜಿಂಕೆ ರಕ್ಷಣೆ: ಯುವಕರಿಂದ ಅರಣ್ಯ ಇಲಾಖೆಗೆ ಹಸ್ತಾಂತರ

0
Sidlaghatta stray deer rescued by local youths and handed to Forest Department

Sidlaghatta : ದಾರಿ ತಪ್ಪಿ ನಗರದ ನೆಹರು ಕ್ರೀಡಾಂಗಣದ ಹಿಂಭಾಗಕ್ಕೆ ಬಂದಿದ್ದ ಜಿಂಕೆಯನ್ನು ಸ್ಥಳೀಯ ಯುವಕರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದರು.

ನಗರದ ನೆಹರು ಕ್ರೀಡಾಂಗಣದ ಹಿಂಭಾಗದಲ್ಲಿರುವ ವಿನೋದ್ ಎಂಬುವರ ಕಟ್ಟಡದಲ್ಲಿ ಸಾಧಿಕ್ ಅವರು ಗಾರೆ ಕೆಲಸ ಮಾಡುತ್ತಿದ್ದ ವೇಳೆ ಜಿಂಕೆ ಬಂದಿರುವುದನ್ನು ಸ್ಥಳೀಯರು ಗಮನಿಸಿದರು. ತಕ್ಷಣ ಮಾಹಿತಿ ಪಡೆದ ಅರ್ಬಾಜ್, ಶಾಜದ್ ಆಲಿ ಹಾಗೂ ಸುಮೇದ್ ಸ್ಥಳಕ್ಕೆ ತೆರಳಿ ಜಿಂಕೆಯನ್ನು ಸುರಕ್ಷಿತವಾಗಿ ರಕ್ಷಿಸಿದರು.

ನಂತರ ಜಿಂಕೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗೆ ಒಪ್ಪಿಸಲಾಯಿತು. ದಾರಿ ತಪ್ಪಿ ನಗರ ಪ್ರದೇಶಕ್ಕೆ ಬಂದಿದ್ದ ಜಿಂಕೆಯನ್ನು ಸುರಕ್ಷಿತವಾಗಿ ರಕ್ಷಿಸಿದ ಯುವಕರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.

In English: Local youths rescued a deer that had strayed into a building behind the Nehru Stadium in Sidlaghatta town and handed it over to Forest Department staff. Masonry worker Sadiq spotted the animal; Arbaaz, Shajad Ali and Sumed reached the spot and rescued it safely, and residents appreciated their effort.

For Daily Updates WhatsApp ‘HI’ to 7406303366

error: Content is protected !!
Exit mobile version