ತಾಲ್ಲೂಕಿನ ಬಶೆಟ್ಟಿಹಳ್ಳಿ ಗೇಟ್‌ನ ಶ್ರೀ ಸಾಯಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಶ್ರೀ ಕೃಷ್ಣ ಜಯಂತೋತ್ಸವ ಅಂಗವಾಗಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಇಂಟರ್‌ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿ ಎಂ.ಮಂಜುನಾಥ್ ಮಾತನಾಡಿದರು.
ಹಿಂದೂ ಧರ್ಮದಲ್ಲಿ ಕೃಷ್ಣನ ಸಂದೇಶ ಅಪಾರ ಹಾಗೂ ಅತ್ಯಂತ ಮಹತ್ವಪೂರ್ಣವಾಗಿದೆ. ಯಾವುದೇ ರಾಜ್ಯದ ರಾಜನಾಗದೇ ಎಲ್ಲ ರಾಜರ ಮಾರ್ಗದರ್ಶಕನಾಗಿದ್ದ ಶ್ರೀಕೃಷ್ಣ. ದುಷ್ಟ ಶಿಕ್ಷಕ, ಶಿಷ್ಟರ ರಕ್ಷಕನಾಗಿರುವ ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಪ್ರಪಂಚಕ್ಕೆ ಜೀವನ ಸಂದೇಶ ಸಾರಿದ್ದು, ಪೋಷಕರು ಮಕ್ಕಳಿಗೆ ಶ್ರೀಕೃಷ್ಣ ನೀಡಿರುವ ಉಪದೇಶಗಳನ್ನು ನಿತ್ಯವೂ ಬೋಧಿಸಬೇಕಿದೆ ಎಂದು ಹೇಳಿದರು.
ಸತ್ಯ, ಧರ್ಮ, ಶಾಂತಿಗೆ ಪ್ರತಿರೂಪವಾಗಿರುವ ಶ್ರೀಕೃಷ್ಣನ ಸಂದೇಶ ಸರ್ವಕಾಲಿಕವಾಗಿದ್ದು, ಸಮಸಮಾಜದ ನಿರ್ಮಾಣಕ್ಕೆ ಶ್ರೀಕೃಷ್ಣನ ಆದರ್ಶಗಳು ದಾರಿದೀಪವಾಗಿದೆ ಎಂದು ಅವರು ತಿಳಿಸಿದರು.
ಶಾಲೆಯಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಶ್ರೀಕೃಷ್ಣನ ವೇಷಭೂಷಣಗಳನ್ನು ಧರಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳ ಪೊಷಕರು ಸಹಾ ಭಾಗವಹಿಸಿ ಶಾಲೆಯಲ್ಲಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖಂಡರಾದ ಶಿವರಾಮರೆಡ್ಡಿ, ಮುನಿಶಾಮಿಗೌಡ, ಶಿಕ್ಷಕರಾದ ವಿನುತ, ಮೀನಾಕ್ಷಿ ಮಾಲಾಶ್ರೀ, ಧನ್ಯ, ರೂಪಾಶ್ರೀ ಮಮತಾ, ಶೈಲಜ, ನೇತ್ರಾವತಿ, ಶ್ರೀನಿವಾಸ್, ಗಜೇಂದ್ರ, ಸೌಮ್ಯ, ಸುಮಿತ್ರ, ಮಂಜುಳ, ಲಲಿತಶ್ರೀ, ಶಾಲಾ ಮಕ್ಕಳ ಪೋಷಕರು, ಶಾಲಾ ಸಿಬ್ಬಂದಿ ಹಾಜರಿದ್ದರು.
- Advertisement -
- Advertisement -
- Advertisement -