ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಹಿಪ್ಪುನೇರಳೆ ಸೊಪ್ಪಿಗೆ ‘ತುಕ್ರಾ’ ರೋಗ ಕಂಡುಬಂದಿದೆ. ಅದನ್ನು ಅಲಕ್ಷಿಸಬೇಡಿ ಎಂದು ಜಿಕೆವಿಕೆ ಕೃಷಿ ವಿಸ್ತರಣ ಪ್ರಾಧ್ಯಾಪಕ ಡಾ. ವೈ.ಎನ್. ಶಿವಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಸೋಮವಾರ ಕೋಟೆ ಚನ್ನೇಗೌಡ ಅವರ ಹಿಪ್ಪುನೇರಳೆ ತೋಟದಲ್ಲಿ ಕೃಷಿ ಮಹಾವಿಶ್ವವಿದ್ಯಾನಿಲಯ ಜಿ.ಕೆ.ವಿ.ಕೆ ಯಿಂದ ಗ್ರಾಮೀಣ ಜಾಗೃತಿ ಕಾರ್ಯನುಭವಕ್ಕೆಆಗಮಿಸಿರುವ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಗೆ ಮತ್ತು ರೈತರಿಗೆ ಅವರು ರೋಗದ ನಿಯಂತ್ರಣದ ಬಗ್ಗೆ ವಿವರಿಸಿದರು.
ತುಕ್ರಾ ರೋಗಕ್ಕೆ ಕಾರಣ ಹಿಟ್ಟುತಿಗಣೆ. ಅದರ ನಿವಾರಣೆಗೆ ರೋಗ ಬಂದ ಗಿಡಗಳನ್ನು ಬುಡ ಸಮೀಪ ಕಟಾವು ಮಾಡಿ. ನುವಾನ್ ಔಷಧಿ ಸಹ ಬಳಸುವಂತೆ ಸಲಹೆ ನೀಡಿದರು.
ಕೃಷಿ ವಿಶ್ವ ವಿದ್ಯಾನಿಲಯ ಜಿ.ಕೆ.ವಿ.ಕೆ ಕೀಟ ಶಾಸ್ತ್ರ ಪ್ರಾಧ್ಯಾಪಕಿ ಡಾ. ಸುಮಿತ್ರಮ್ಮ ಮಾತನಾಡಿ, ಪರತಂತ್ರ ಜೀವಿಗಳನ್ನು ಬಿಟ್ಟು ಈ ರೋಗವನ್ನು ನಿಯಂತ್ರಿಸಬಹುದು. ಗುಲಗಂಜಿ ಹುಣ ಎನ್ನುವ ಪರತಂತ್ರ ಜೀವಿಯಿಂದ ತುಕ್ರಾ ರೋಗಕ್ಕೆ ಕಾರಣವಾದ ಹಿಟ್ಟುತಿಗಣೆಯನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಗ್ರಾಮೀಣ ಜಾಗೃತಿ ಕಾರ್ಯನುಭವಕ್ಕೆಆಗಮಿಸಿರುವ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಾದ ಅಜಿತ್, ಬಾಲಗಂಗಾಧರ ತಿಲಕ್, ಅನಿಲ್, ಅಕ್ಷಯ್ ಹೊಸಮನಿ, ಅರ್ಚನ, ಅಶ್ವಿನಿ, ಅರ್ಜುನ್ ಹಾಜರಿದ್ದರು.
- Advertisement -
- Advertisement -
- Advertisement -







