ಪ್ರೊ.ಬಿ.ಕೃಷ್ಣಪ್ಪ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ

- Advertisement -
- Advertisement -

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಶಾಖೆಯ ವತಿಯಿಂದ ಪ್ರೊ.ಬಿ.ಕೃಷ್ಣಪ್ಪ ಪ್ರಶಸ್ತಿ ಪುರಸ್ಕೃತರಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಸಂಸರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್‌ ಮಾತನಾಡಿದರು.
ಯಾವುದೇ ಫಲಾಪೇಕ್ಷೆಯಿಲ್ಲದೆ ಶೋಷಿತ ವರ್ಗದ ಅಭ್ಯುದಯಕ್ಕಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇವೆ. ಹೋರಾಟಗಳು ದಮನಿತರ ದನಿಯಾಗಿರಬೇಕು. ಸ್ವಾರ್ಥದಿಂದ ಗೂರವಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಶೋಷಿತ ವರ್ಗದ ವಿಮೋಚನೆಗಾಗಿ ಶ್ರಮಿಸಿದ ದಾರ್ಶನಿಕ, ಮಹಾಮಾನವತಾವಾದಿ, ಸಂವಿಧಾನಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನ, ವಿಚಾರಗಳು ನಮ್ಮ ಪ್ರಗತಿಗೆ ದಿಕ್ಸೂಚಿ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರೊ.ಬಿ.ಕೃಷ್ಣಪ್ಪ ಪ್ರಶಸ್ತಿ ಪುರಸ್ಕೃತರಾದ ದ.ಸಂ.ಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್‌ ಅವರನ್ನು ಅಭಿನಂದಿಸಲಾಯಿತು.
ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕ ಎಚ್‌.ಎನ್‌.ಸನಂದ್‌ಕುಮಾರ್‌, ಭಾಗ್ಯಮ್ಮ ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಜನಾರ್ಧನ್‌ಬಾಬು, ತಾಲ್ಲೂಕು ಸಂಚಾಲಕ ಎಚ್‌.ಎಂ.ಮುನಿಆಂಜಿನಪ್ಪ, ತೊಟ್ಲಗಾನಹಳ್ಳಿ ದ್ಯಾವಪ್ಪ, ಯಾಮ ನಾರಾಯಣಸ್ವಾಮಿ, ಹಿತ್ತಲಹಳ್ಳಿ ದೇವರಾಜ್‌, ಬೈರಸಂದ್ರ ದೇವರಾಜ್‌, ಯಣ್ಣಂಗೂರು ಸುಬ್ರಮಣಿ, ದಿಬ್ಬೂರಹಳ್ಳಿ ಮಂಜುನಾಥ್‌, ಕೃಷ್ಣಯ್ಯ, ಮಂಜುಳಮ್ಮ, ವೆನ್ನೆಲ, ಮೋಟಮ್ಮ, ಭಾಗ್ಯಮ್ಮ, ಶಶಿಕಲಾ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!