ರೈತರ ಹುತಾತ್ಮ ದಿನಾಚರಣೆ ಕಾರ್ಯಕ್ರಮ

- Advertisement -
- Advertisement -

ತಾಲ್ಲೂಕಿನ ಸಾದಲಿ ಹೋಬಳಿಯ ಟಿ.ವೆಂಕಟಾಪುರ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಆಯೋಜಿಸಿದ್ದ 38ನೇ ವರ್ಷದ ರೈತರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಮಾತನಾಡಿದರು.
ಜನರ ಅನುಕೂಲಕ್ಕಾಗಿಯೇ ಸರ್ಕಾರ ಇರುವುದು ಹಾಗೂ ಆ ಉದ್ದೇಶದಿಂದಲೇ ಕಾರ್ಯ ಯೋಜನೆಯನ್ನು ರೂಪಿಸುತ್ತದೆ. ರೈತರ ಹೋರಾಟ ಎಂದಿಗೂ ಉತ್ತಮ ಉದ್ದೇಶದಿಂದ ಕೂಡಿದ್ದು ಫಲಪ್ರದವಾಗಿಯೇ ಇರುತ್ತದೆ ಎಂದು ಅವರು ತಿಳಿಸಿದರು.
ರೈತರು ಹಲವು ಹಕ್ಕೊತ್ತಾಯಗಳನ್ನು ಮಂಡಿಸಿದ್ದು ಅವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಾಪಾಗ್ನಿ ನದಿಯಲ್ಲಿ ಬಿದ್ದು ನಿಧನರಾಗಿರುವ ವರ್ಲಪ್ಪನಹಳ್ಳಿಯ ರೈತ ತಿರುಮಳಪ್ಪ ಅವರ ಆತ್ಮಕ್ಕೆ ಶಾಂತಿ ಕೋರಿದರು. ಟಿ.ವೆಂಕಟಾಪುರದಿಂದ ದಾಸರಹಳ್ಳಿಯವರೆಗೂ ನೀರಿನಲ್ಲಿ ಜನರು ಕಷ್ಟಪಡುತ್ತಾ ಸಾಗಬೇಕಿದೆ. ಅದಕ್ಕಾಗಿ ಸುಮಾರು 500 ಅಡಿ ಸೇತುವೆ ನಿರ್ಮಾಣ ಮಾಡಬೇಕೆಂದು ರೈತ ಸಂಘದವರು ಹಾಗೂ ದಿಂಬಾರ್ಲಹಳ್ಳಿ, ದಾಸಾರ್ಲಹಳ್ಳಿ, ಬುಡವಾರಹಳ್ಳಿ, ವರ್ಲಪ್ಪನಹಳ್ಳಿ, ಗಾಜುಲವಾರಹಳ್ಳಿ, ರಾಯಪ್ಪನಹಳ್ಳಿ, ತಿಮ್ಮನಾಯಕನಹಳ್ಳಿ, ಅಲಗುರ್ಕಿ ಗ್ರಾಮಗಳ ರೈತರು ಒತ್ತಾಯಿಸಿದರು. ಜೊತೆಯಲ್ಲಿ ಹಲವು ಹಕ್ಕೊತ್ತಾಯಗಳಿರುವ ಮನವಿ ಪತ್ರವನ್ನು ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಅವರಿಗೆ ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ಎನ್‌.ಮಂಜುನಾಥ್‌, ನಾರಾಯಣಸ್ವಾಮಿ, ಶಿವಣ್ಣ, ಹರೀಶ್‌, ನಾರಾಯಣಸ್ವಾಮಿ, ವೆಂಕಟರೆಡ್ಡಿ, ಲಕ್ಷ್ಮೀಕಾಂತರೆಡ್ಡಿ ಹಾಜರಿದ್ದರು.

Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!