ಪ್ರಾಚೀನ ಕೋಡಿ ಶಾಸನ ಪತ್ತೆ

- Advertisement -
- Advertisement -

Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ, ಜಂಗಮಕೋಟೆ ಹೋಬಳಿಯ ಭದ್ರನಕೆರೆಯ ಪಶ್ಚಿಮ ದಿಕ್ಕಿನ ತೋಟವೊಂದರಲ್ಲಿ ಕ್ರಿ.ಶ 1338 ನೇ ಇಸವಿಯ ಶಿಲಾಶಾಸನವೊಂದನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಾದ ಪ್ರೊ.ಕೆ.ಆರ್.ನರಸಿಂಹನ್, ಕೆ.ಧನಪಾಲ್ ಮಂಚೇನಹಳ್ಳಿ, ಡಿ.ಎನ್.ಸುದರ್ಶನ್‌ ರೆಡ್ಡಿ, ಶಿಕ್ಷಕ ವಿ.ಚಂದ್ರಶೇಖರ್ ಅವರನ್ನೊಳಗೊಂಡ ತಂಡ ಪತ್ತೆಮಾಡಿದೆ.

ಹೊಯ್ಸಳರ ಮೂರನೇ ವೀರಬಲ್ಲಾಳದೇವನ ಮಹಾಸಾಮಂತಾಧಿಪತಿ ಗುಂಡ್ರಗೂಳಿ ಮಂಜಯ್ಯ ನಾಯಕ “ಸುಗಟೂರು ಕೆರೆ”ಗೆ ಹಾಕಿಸಿರುವ ಕೋಡಿ ಶಾಸನ ಇದಾಗಿದೆ. ಪ್ರಾಚೀನ ಕಾಲದ ನಾಡುಗಳಾದ ಕೈವಾರನಾಡು ಮತ್ತು ಕಳವಾರನಾಡಿನ ನಡುವೆ ಬರುವ “ಅಂಬಡಕ್ಕಿನಾಡು” ವಿಗೆ ಮಂಜಯ್ಯನಾಯಕ ಅಧಿಪತಿ ಆಗಿದ್ದ ವಿಷಯ ಶಿಡ್ಲಘಟ್ಟ, ದೇವನಹಳ್ಳಿ ಮತ್ತು ಹೊಸಕೋಟೆ ತಾಲ್ಲೂಕಿನ ಹಲವಾರು ಶಾಸನಗಳಿಂದ ನಮಗೆ ತಿಳಿದುಬರುತ್ತದೆ.

ಮೂರನೇ ವೀರಬಲ್ಲಾಳದೇವನು ತಿರುವಣ್ಣಾಮಲೈಯಲ್ಲಿ ಇದ್ದುಕೊಂಡು ದೆಹಲಿ ಸುಲ್ತಾನರ ವಿರುದ್ಧವಾಗಿ ಮಿತ್ರ ಪಡೆಗಳನ್ನು ಸಂಘಟಿಸುವ ಕೆಲಸದಲ್ಲಿ ನಿರತನಾಗಿದ್ದ ಸಮಯದಲ್ಲಿ ಮಂಜಯ್ಯ ನಾಯಕನಿಗೆ ಅಂಬಡಕ್ಕಿ ನಾಡಿನ ಅಭಿವೃದ್ಧಿ ಮಾಡಲು ಹೆಚ್ಚಿನ ಸ್ವಾಯತ್ತತೆ ಸಿಕ್ಕಿತ್ತು. ತಾಲ್ಲೂಕಿನ ಚೀಮಂಗಲ, ಗುಡಿಹಳ್ಳಿ, ಹೇಮಾರ್ಲಹಳ್ಳಿಯವರೆಗೂ ಇದ್ದ ಈ ನಾಡಿನ ಕೇಂದ್ರವು ಇತಿಹಾಸ ಪ್ರಸಿದ್ಧ ಹುಣಸೆ ನಲ್ಲೂರು ಆಗಿದ್ದಿತು.

ಮಂಜಯ್ಯ ನಾಯಕನ ವೈಶಿಷ್ಟ್ಯ ಏನೆಂದರೆ ಈತನು ಹೊಯ್ಸಳರ ಸಾಮಂತಸೇನಾಧಿಪತಿ ಆಗಿದ್ದವನು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿಯೂ ಹಾಗೇ ಮುಂದುವರೆಯುತ್ತಾನೆ. ಈತನ ವಂಶೀಕರಾದ ಸೊಣ್ಣಯ್ಯನಾಯಕ, ಅಂಕಯ್ಯನಾಯಕ, ತಮ್ಮಯ್ಯನಾಯಕರು ಕೂಡಾ ಇತಿಹಾಸದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರು ವಿವರಿಸಿದರು.

ಶಾಸನವನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಾದ ಪ್ರೊ.ಕೆ.ಆರ್.ನರಸಿಂಹನ್, ಧನಪಾಲ್ ಮಂಚೇನಹಳ್ಳಿ, ಡಿ.ಎನ್.ಸುದರ್ಶನ್ ರೆಡ್ಡಿ ಮತ್ತು ಕಾಚಹಳ್ಳಿಯ ಸರ್ಕಾರಿ ಶಾಲಾ ಶಿಕ್ಷಕರೂ ಆದ ವಿ.ಚಂದ್ರಶೇಖರ್ ತಂಡ ಓದಿತು. ಶಾಸನದ ಅನ್ವೇಷಣೆ, ಸಂರಕ್ಷಣೆ ಕೆಲಸದಲ್ಲಿ ಯಲುವಹಳ್ಳಿ ಮತ್ತು ಮಿತ್ತನಹಳ್ಳಿ ಗ್ರಾಮದ ಶಂಕರಣ್ಣ, ಮಣಿಕುಮಾರ್ ಮುಂತಾದವರು ಸಹಕರಿಸಿದರು.

ಇದುವರೆಗೂ ಎಪಿಗ್ರಫಿ ಕರ್ನಾಟಕದಲ್ಲಿ ಹಾಗೂ ಇತರ ಶಾಸನಾಧ್ಯಯನದಲ್ಲಿ ದಾಖಲಾಗದ ಶಾಸನವನ್ನು ಹುಡುಕಿರುವ ಈ ತಂಡ ಇತಿಹಾಸದ ರಚನೆಯಲ್ಲಿ ನೆರವಾಗುವ ಈ ಐತಿಹಾಸಿಕ ದಾಖಲೆಗಳಿರುವ ಶಿಲೆಯನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!