Home News ಪ್ರಿಯತಮನ ಹೆಂಡತಿಗೆ ಚಾಕು ಇರಿದ ಯುವತಿ

ಪ್ರಿಯತಮನ ಹೆಂಡತಿಗೆ ಚಾಕು ಇರಿದ ಯುವತಿ

0
Sidlaghatta Anemadugu Attempt to Murder Lover Wife

ಪ್ರೀತಿಸಿದ ಯುವಕನನ್ನು ಒಲಿಸಿಕೊಳ್ಳಲು ಆತನ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಮುಂದಾದ ಘಟನೆ ಶಿಡ್ಲಘಟ್ಟ ತಾಲ್ಲೂಕು ಆನೆಮಡಗು ಗ್ರಾಮದಲ್ಲಿ ನಡೆದಿದೆ.

ಶಿಡ್ಲಘಟ್ಟ ತಾಲ್ಲೂಕು ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆನೆಮಡಗು ಗ್ರಾಮದ ಗಂಗೋತ್ರಿ ಎಂಬ ಯುವತಿ ಅದೇ ಗ್ರಾಮದ ಮೋನಿಕಾಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದು, ಗಾಯಗೊಂಡ ಮೋನಿಕಾ ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇತ್ತ ಚಾಕುವಿನಿಂದ ತಿವಿದ ಅದೇ ಗ್ರಾಮದ ಗಂಗೋತ್ರಿ ಜೈಲು ಪಾಲಾಗಿದ್ದಾಳೆ.

ಮೊನಿಕಾಳ ಗಂಡ ಹಾಗೂ ಗಂಗೋತ್ರಿಯ ಪ್ರಿಯಕರ ಎಂದು ಹೇಳಲಾದ ಗಂಗರಾಜು ಈಗ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಆನೆಮಡಗು ಗ್ರಾಮದ ಗಂಗರಾಜು ಅದೇ ಗ್ರಾಮದ ಮೋನಿಕಾ ಹಾಗೂ ಗಂಗೋತ್ರಿ ಎಂಬುವವರನ್ನು ಒಬ್ಬರಿಗೆ ತಿಳಿಯದಂತೆ ಒಬ್ಬರನ್ನು ಪ್ರೀತಿಸುತ್ತಿದ್ದ, ಕೊನೆಗೆ ಕಾರಣಾಂತರಗಳಿಂದ ಗಂಗೋತ್ರಿಯನ್ನು ಬಿಟ್ಟು ಮೋನಿಕಾಳನ್ನು ಮದುವೆಯಾಗಿದ್ದ ಎನ್ನಲಾಗಿದೆ. ತನ್ನ ಪ್ರಿಯಕರನ್ನು ಒಲಿಸಿಕೊಳ್ಳಲು ಅಡ್ಡಿಯಾಗಿದ್ದ ಗಂಗರಾಜು ಹೆಂಡತಿ ಮೋನಿಕಾಳನ್ನು ಮುಗಿಸಲು ಗಂಗೋತ್ರಿ ಸಂಚು ಹೂಡಿದ್ದು, ಯಾರೂ ಇಲ್ಲದ ಸಮಯದಲ್ಲಿ ಮಾತನಾಡುವ ನೆಪದಲ್ಲಿ ಮೋನಿಕಾಳ ಮನೆಗೆ ಹೋಗಿ ಅವಳ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾಳೆ ಎನ್ನಲಾಗಿದೆ.

ಗಾಯಗೊಂಡ ಮೋನಿಕಾ ಕಿರುಚಾಡುತ್ತಿದ್ದಂತೆ ಗಂಗೋತ್ರಿ ಸ್ಥಳದಿಂದ ಪರಾರಿಯಾಗಿದ್ದು ಅಕ್ಕಪಕ್ಕದವರು ಮೋನಿಕಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗಂಗೋತ್ರಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಮೊನಿಕಾಳ ಪತಿ ಗಂಗರಾಜು ಘಟನೆಯ ನಂತರ ತಲೆ ಮರೆಸಿಕೊಂಡಿದ್ದು, ಕೊಲೆ ಪ್ರಯತ್ನದಲ್ಲಿ ಗಂಗರಾಜುವಿನ ಪಾತ್ರದ ಕುರಿತು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version