Home News ಮಾರಕಾಸ್ತ್ರದಿಂದ ಹೊಡೆದು ಕೊಲೆ

ಮಾರಕಾಸ್ತ್ರದಿಂದ ಹೊಡೆದು ಕೊಲೆ

0
Sidlaghatta Kannamangala Chikka Anjinappa Murder

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ (Kannamangala) ಗ್ರಾಮದ ಚಿಕ್ಕ ಆಂಜಿನಪ್ಪ (38) (Chikka Anjinappa) ಎಂಬುವವರನ್ನು ಗುರುವಾರ ರಾತ್ರಿ ಮಾರಕಾಸ್ತ್ರದಿಂದ ಹೊಡೆದು ಕೊಲೆ (Murder) ಮಾಡಲಾಗಿದೆ.

ಚಿಕ್ಕ ಆಂಜಿನಪ್ಪ ಗುರುವಾರ ರಾತ್ರಿ ಶಿಡ್ಲಘಟ್ಟ ದಿಂದ ತನ್ನ ಸ್ವಗ್ರಾಮ ಕನ್ನಮಂಗಲಕ್ಕೆ ತನ್ನ ಬೈಕ್ ನಲ್ಲಿ ಹೋಗುತ್ತಿದ್ದಾಗ ನಾರಾಯಣದಾಸರಹಳ್ಳಿಯ ಗೇಟ್ ನಲ್ಲಿ ಅಪರಿಚಿತರು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಕೊಲೆಗೀಡಾದ ಆಂಜಿನಪ್ಪ ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದು, ಗ್ರಾಮದ ಸುತ್ತಲೂ ಅನೇಕರಿಗೆ ಸಹಾಯ ಮಾಡುತ್ತಾ, ಸಮಾಜ ಸೇವೆ ಸಲ್ಲಿಸುತ್ತಿದ್ದು, ಸುದ್ದಿ ತಿಳಿಯುತ್ತಲೆ ನೂರಾರು ಜನರು ಸ್ಥಳಕ್ಕೆ ಆಗಮಿಸಿದ್ದರು.

ಕನ್ನಮಂಗಲ ಗ್ರಾಮದಲ್ಲಿ ಯಾವುದೇ ಅನ್ಯಾಯವಾದರೂ ನನ್ನ ಅಣ್ಣ ಖಂಡಿಸುತ್ತಿದ್ದರು. ಗ್ರಾಮದ ಗೋಕುಂಟೆಯಲ್ಲಿ ಗ್ರಾಮದವರೊಬ್ಬರು ಪಾಯ ಹಾಕಿದಾಗ ನನ್ನ ಅಣ್ಣ ಸಿವಿಲ್ ಮೊಕದ್ದಮೆ ಹೂಡಿಸಿದ್ದರು. ಗ್ರಾಮದಲ್ಲಿ ಅಪ್ರಾಪ್ತ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಮಾಡಿದವರ ವಿರುದ್ಧ ಆ ಹೆಣ್ಣು ಮಗುವಿನ ಪೋಷಕರ ಕೈಲಿ ದೂರು ಕೊಡಿಸಿದ್ದರು. ನಾಲ್ಕು ದಿನಗಳ ಹಿಂದೆ ಗ್ರಾಮದ ಕೆಲವರು ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದರು. ನನ್ನ ಅಣ್ಣನನ್ನು ಹಿಂಬಾಲಿಸಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆ” ಎಂದು ಮೃತರ ತಮ್ಮ ಅಶ್ವತ್ಥ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಶಿಡ್ಲಘಟ್ಟ ಗ್ರಾಮಾಂತರ ಪೋಲಿಸ್ ರು ಮತ್ತು ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ದೇಹವನ್ನು ಮೃತರ ಕುಟುಂಬದವರ ವಶಕ್ಕೆ ನೀಡಲಾಯಿತು. ಶುಕ್ರವಾರ ಸಂಜೆ ಮೃತನ ಗ್ರಾಮ ಕನ್ನಮಂಗಲದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version