Home News ಕನ್ನಮಂಗಲದಲ್ಲಿ “ಕ್ರಿಕೆಟ್ ಹಬ್ಬ”

ಕನ್ನಮಂಗಲದಲ್ಲಿ “ಕ್ರಿಕೆಟ್ ಹಬ್ಬ”

0
Sidlaghatta Kannamangala Cricket Habba

Kannamangala, Sidalghatta : ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಕೆರೆ ಮೈದಾನದಲ್ಲಿ 15 ನೇ ವರ್ಷದ ಸುಭಾಷ್ ಕ್ರಿಕೆಟ್ ಟೂರ್ನಮೆಂಟ್ “ಕನ್ನಮಂಗಲ ಕ್ರಿಕೆಟ್ ಹಬ್ಬ”ಕ್ಕೆ (Cricket Habba) ಚಾಲನೆ ನೀಡಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಅವರು ಮಾತನಾಡಿದರು.

ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡೆಗಳನ್ನು ಆಯೋಜಿಸುವುದರಿಂದ ಯುವಕರಲ್ಲಿ ಸಕಾರಾತ್ಮಕ ಮನೋಭಾವ ಮತ್ತು ಐಕ್ಯತೆ ಮೂಡುತ್ತದೆ. ಕ್ರೀಡೆಯನ್ನು ಸ್ಪರ್ಧಾತ್ಮಕವಾಗಿ ಹಬ್ಬದ ರೀತಿಯಲ್ಲಿ ಆಯೋಜಿಸಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಯುವ ಜನರು ದಾರಿ ತಪ್ಪಲು ಸಾಕಷ್ಟು ಅವಕಾಶಗಳಿವೆ. ಸರಿ ದಾರಿಗೆ ತರಬೇಕೆಂದರೆ ಉತ್ತಮ ಸಂಘಟನಾತ್ಮಕ ಚಟುವಟಿಕೆಗಳನ್ನು ನಡೆಸುವುದು, ಸಾಂಸ್ಕೃತಿಕ ಹಾಗೂ ಕ್ರೀಡೆಗಳನ್ನು ನಡೆಸುತ್ತಿರಬೇಕು. ಈಗಿನ ತಂತ್ರಜ್ಞಾನವನ್ನು ಗ್ರಾಮೀಣಾಭಿವೃದ್ಧಿಗೆ ಬಳಕೆ ಮಾಡುವ ಹೊಣೆ ಯುವಜನರ ಮೇಲಿದೆ ಎಂದು ಹೇಳಿದರು.

“ಕನ್ನಮಂಗಲ ಕ್ರಿಕೆಟ್ ಹಬ್ಬ”ದ ವಿಜೇತ ತಂಡಕ್ಕೆ ಒಂದು ಲಕ್ಷ ರೂ ಬಹುಮಾನ ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಐವತ್ತು ಸಾವಿರ ರೂ ಮತ್ತು ಟ್ರೋಫಿ ಹಾಗೂ ಮ್ಯಾನ್ ಆಫ್ ದ ಸೀರೀಸ್ ಗೆ ಆಕರ್ಷಕ ಟ್ರೋಫಿಯನ್ನು ಎ.ಬಿ.ಡಿ ಗ್ರೂಪ್ ಅಧ್ಯಕ್ಷ ರಾಜೀವ್ ಗೌಡ ಪ್ರಾಯೋಜಿಸಿದ್ದರು.

ಕೆ.ಎಂ.ಎಫ್ ನಿರ್ದೇಶಕ ಆರ್.ಶ್ರೀನಿವಾಸ್, ಸ್ನೇಹ ಯುವಕ ಬಳಗದ ವಸಂತ ವಲ್ಲಭ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಸುಭಾಷ್ ಕ್ರಿಕೆಟರ್ಸ್, ಗ್ರಾಮಸ್ಥರು, ಶಿಕ್ಷಕರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version