Home News ಮನೆ ಕುಸಿದು ಅತಂತ್ರ ಸ್ಥಿತಿಯಲ್ಲಿ ಅಂಗವಿಕಲ ದಂಪತಿ

ಮನೆ ಕುಸಿದು ಅತಂತ್ರ ಸ್ಥಿತಿಯಲ್ಲಿ ಅಂಗವಿಕಲ ದಂಪತಿ

0
Appegowdanahalli Homeless Physically Challenged Couple

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ನಿವಾಸಿಗರಾದ ಅಂಗವಿಕಲ ದಂಪತಿಯ ಮನೆಯ ಗೋಡೆಯು ಕುಸಿದಿದ್ದು, ಕನಿಷ್ಟ ಅದರ ದುರಸ್ತಿಗೂ ಹಣವಿಲ್ಲದೆ ಅವರು ಅತಂತ್ರರಾಗಿದ್ದಾರೆ.

 ನಿವಾರ್ ಸೈಕ್ಲೋನ್ ಪರಿಣಾಮವಾಗಿ ಸುರಿದ ಮಳೆಯಿಂದ ಅಪ್ಪೇಗೌಡನಹಳ್ಳಿಯ ಅಂಗವಿಕಲ ದಂಪತಿ ದೇವೀರಮ್ಮ ಮತ್ತು ರತ್ನಪ್ಪ ಅವರ ಹಳೆಯ ಜಂತಿಕೆ ಮನೆಯ ಎರಡು ಕಡೆ ಗೋಡೆ ಕುಸಿದಿದೆ. ಮಾಳಿಗೆ ಈಗಲೋ ಆಗಲೋ ಕುಸಿಯುವಂತಿದೆ. ಅವರೀಗ ಜೀವ ಭಯದಿಂದ ವಾಸಿಸುತ್ತಿದ್ದಾರೆ.

 ಅಶಕ್ತ ಸ್ಥಿತಿಯಲ್ಲಿರುವ ಅವರು ಸರ್ಕಾರ ಹಾಗೂ ಸಮುದಾಯದ ನೆರವನ್ನು ಯಾಚಿಸುತ್ತಿದ್ದಾರೆ. 

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version