Home News ಓಂ ಶಕ್ತಿ ಪ್ರಯಾಣಕ್ಕೆ ಚಾಲನೆ

ಓಂ ಶಕ್ತಿ ಪ್ರಯಾಣಕ್ಕೆ ಚಾಲನೆ

0
Sidlaghatta Om Shakti Pilgrimage

Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯಸ್ವಾಮಿ ದೇವಾಲಯದ ಬಳಿ ತಮಿಳುನಾಡಿನ ಮೇಲ್ಮರುವತ್ತೂರಿನ ಪುಣ್ಯಕ್ಷೇತ್ರ ಅಧಿಪರಾಶಕ್ತಿ ಓಂ ಶಕ್ತಿ ಅಮ್ಮನವರ ದೇವಾಲಯಕ್ಕೆ ಮಾಲೆ ಧರಿಸಿದ 500 ಕ್ಕೂ ಹೆಚ್ಚು ಮಹಿಳೆಯರ ಯಾತ್ರೆಗೆ ಬುಧವಾರ ಶಾಸಕ ಬಿ.ಎನ್. ರವಿಕುಮಾರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ತಮಿಳುನಾಡಿನ ಮೇಲ್ಮರುವತ್ತೂರಿನ ಅಧಿಪರಾಶಕ್ತಿ ಸಿದ್ಧರ ಪೀಠವು ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು, 21 ಸಿದ್ಧ ಪುರುಷರು ಮತ್ತು ಮಹಿಳೆಯರು ಜೀವಂತ ಸಮಾಧಿಯಾಗಿದ್ದರು ಎನ್ನುವ ನಂಬಿಕೆ ಇದೆ ಎಂದು ವಿವರಿಸಿದರು. ಶಬರಿಮಲೆ ದೇವಸ್ಥಾನಕ್ಕೆ ಮಾಲೆ ಧರಿಸುವ ಪಧ್ಧತಿಯಂತೆ ಈ ದೇವಾಲಯಕ್ಕೂ ಭಕ್ತರು ಮಾಲೆ ಧರಿಸುತ್ತಾರೆ. ಇಂತಹ ಆಧ್ಯಾತ್ಮಿಕ ಸ್ಥಳಕ್ಕೆ ನಮ್ಮ ಕ್ಷೇತ್ರದ ನೂರಾರು ಮಹಿಳೆಯರು ಶ್ರದ್ಧೆಯಿಂದ ವ್ರತ ಕೈಗೊಂಡು ಹೋಗುತ್ತಿರುವುದು ಇಷ್ಟಾರ್ಥ Siddhi ಗೆ ಕಾರಣವಾಗುತ್ತದೆ. ಮಾತೆಯರು ತಮ್ಮ ಕುಟುಂಬದ ಜೊತೆಗೆ ಸಮೃದ್ಧ ಮಳೆ, ಬೆಳೆ, ಮತ್ತು ಜನಜೀವನದ ಸುಖಕ್ಕಾಗಿ ದೇವರ ಅನುಗ್ರಹ ಕೋರಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪೇಗೌಡನಹಳ್ಳಿ ಕೆ. ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ಮೇಲ್ಮರುವತ್ತೂರಿನ ಆದಿ ಪರಾಶಕ್ತಿ ತಾಯಿಯ ಮೇಲೆ ಈ ಮಹಿಳೆಯರ ಭಕ್ತಿ ಮತ್ತು ಶ್ರದ್ಧೆ ನಮ್ಮ ಊರಿನ ಮತ್ತು ನಾಡಿನ ಕಲ್ಯಾಣಕ್ಕೆ ಮಾರ್ಗದರ್ಶಕವಾಗುತ್ತದೆ. ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಶ್ರದ್ಧಾಭಕ್ತಿಯಿಂದ ಭಾಗವಹಿಸುತ್ತಿರುವುದು ಮುಂದಿನ ಪೀಳಿಗೆಯವರಿಗೂ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಎ.ಎಂ. ತ್ಯಾಗರಾಜ್, ಮುನಿರೆಡ್ಡಿ, ಬೈರರೆಡ್ಡಿ, ಸುದೀಪ್, ಪ್ರಸನ್ನ, ಮುನೀಂದ್ರ, ದ್ಯಾವಪ್ಪ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version