Home News ಆಷಾಢ ಶುಕ್ರವಾರ: ಮಳೆಗಾಗಿ ಗ್ರಾಮದೇವತೆಯರ ಅದ್ದೂರಿ ಮೆರವಣಿಗೆ

ಆಷಾಢ ಶುಕ್ರವಾರ: ಮಳೆಗಾಗಿ ಗ್ರಾಮದೇವತೆಯರ ಅದ್ದೂರಿ ಮೆರವಣಿಗೆ

0
Melur Village Rain Prayer Procession Ashada Friday

Sidlaghatta ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಆಷಾಢ ಶುಕ್ರವಾರದ ಅಂಗವಾಗಿ ಶ್ರೀ ಗಂಗಾದೇವಿ, ಸಪ್ಪಲಮ್ಮ, ಕರಗದಮ್ಮ, ಚೌಡೇಶ್ವರಮ್ಮ ಹಾಗೂ ಸುಗ್ಗಲಮ್ಮ ದೇವಿಯರ ಅದ್ದೂರಿ ಮೆರವಣಿಗೆ ನಡೆಯಿತು.

ಆಗಸ್ಟ್ ತಿಂಗಳು ಆರಂಭವಾದರೂ ಮಳೆ ಬಾರದ ಹಿನ್ನೆಲೆಯಲ್ಲಿ ಬರಗಾಲದ ಆತಂಕ ಎದುರಾಗಿದ್ದು, ಉತ್ತಮ ಮಳೆ ಹಾಗೂ ಬೆಳೆಗಾಗಿ ಗ್ರಾಮಸ್ಥರು ದೇವರ ಮೊರೆ ಹೋದರು. ಭಕ್ತಿಭಾವದಿಂದ ನಡೆದ ಮೆರವಣಿಗೆಯಲ್ಲಿ ಮಹಿಳಾ ಭಕ್ತರು ತಮ್ಮ ಮನೆಗಳ ಮುಂದೆ ಸಾರಿಸಿ, ರಂಗೋಲಿ ಹಾಕಿ ದೇವಿಯರನ್ನು ಬರಮಾಡಿಕೊಂಡರು. ದೇವಿಯರಿಗೆ ಎಳ್ಳು–ಬೆಲ್ಲ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ, ಗ್ರಾಮದಲ್ಲಿ ಶಾಂತಿ ನೆಲೆಸುವುದರೊಂದಿಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬರಲಿ ಎಂದು ಪ್ರಾರ್ಥಿಸಿದರು.

ಮೆರವಣಿಗೆಯಲ್ಲಿ ಮೇಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

In English:

With August underway and rain still scarce, raising fears of drought, villagers at Basaveshwara layout in Melur held a grand procession of goddesses Sri Gangadevi, Sappalamma, Karagadamma, Choudeshwaramma, and Suggalamma on Ashada Friday, praying for good rain and a bountiful harvest. Women devotees welcomed the deities with rangoli outside their homes, offered sesame-jaggery (ellu-bella) and special prayers, and hundreds from Melur and neighbouring villages joined the procession, with food (anna prasada) served throughout.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version