Home News 64ನೇ ವರ್ಷದ ಗಣೇಶ ಚತುರ್ಥಿ ಉತ್ಸವ: ನಗರ್ತ ಮಂಡಳಿಯಿಂದ ಅದ್ದೂರಿ ವಿಸರ್ಜನಾ ಮೆರವಣಿಗೆ

64ನೇ ವರ್ಷದ ಗಣೇಶ ಚತುರ್ಥಿ ಉತ್ಸವ: ನಗರ್ತ ಮಂಡಳಿಯಿಂದ ಅದ್ದೂರಿ ವಿಸರ್ಜನಾ ಮೆರವಣಿಗೆ

0

Sidlaghatta : ನಗರದ 1ನೇ ನಗರ್ತರ ಪೇಟೆಯ ಶ್ರೀ ನಾಗರೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಅಯೋಧ್ಯಾನಗರ ಶಿವಾಚಾರ್ಯ ವೈಶ್ಯ ನಗರ್ತ ಮಂಡಳಿ ವತಿಯಿಂದ 64ನೇ ವರ್ಷದ ಗಣೇಶ ಚತುರ್ಥಿ ಉತ್ಸವವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ಐದು ದಿನಗಳ ಕಾಲ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಬಳಿಕ ಶನಿವಾರ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲಾಯಿತು.

ವಾದ್ಯಮೇಳಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಯುವಕರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಗಣಪತಿಯ ಜಯಘೋಷಗಳೊಂದಿಗೆ ಯುವಕರು ಸಂಭ್ರಮದಿಂದ ಹೆಜ್ಜೆ ಹಾಕಿದರೆ, ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರುಗು ತಂದರು.

ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ ಗುಡಿಹಳ್ಳಿ ಕೆರೆಯವರೆಗೆ ತೆರಳಿತು. ಬಳಿಕ ಭಕ್ತಿಭಾವದಿಂದ ಗಣೇಶ ಮೂರ್ತಿಗೆ ವಿದಾಯ ಹೇಳಿ ಗುಡಿಹಳ್ಳಿ ಕೆರೆಯಲ್ಲಿ ವಿಸರ್ಜನೆ ನೆರವೇರಿಸಲಾಯಿತು. ಗಣೇಶನ ಜಯಘೋಷಗಳೊಂದಿಗೆ ನಡೆದ ವಿಸರ್ಜನಾ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ನಗರ್ತ ಮಂಡಳಿ ಅಧ್ಯಕ್ಷ ಕೆ.ಆರ್. ಶಿವಶಂಕರ್, ಉಪಾಧ್ಯಕ್ಷ ಎಸ್. ನಾಗರಾಜ್, ಆರ್. ಮಲ್ಲಿಕಾರ್ಜುನ್, ಕೆ.ಎಂ. ವಿನಾಯಕ್, ಯುವಕ ಮಂಡಳಿ ಅಧ್ಯಕ್ಷ ಮಂಜುನಾಥ್, ಸ್ಟುಡಿಯೋ ಮಂಜುನಾಥ್, ನವೀನ್, ಮುರಳಿ, ರೋಹಿತ್, ಎಸ್.ಆರ್. ರಾಮಚಂದ್ರ, ಶ್ರೀ ನಾಗರೇಶ್ವರ ಸ್ವಾಮಿ ದೇವಾಲಯದ ಅರ್ಚಕ ಮಂಜುನಾಥ್, ಸುಮಂತ್, ಚಂದನ್, ಬಾಲಾಜಿ, ರಕ್ಷಿತ್, ಭರತ್, ಮಾನಸ್ ಸೇರಿದಂತೆ ನಗರ್ತ ಮಂಡಳಿ, ಯುವಕ ಮಂಡಳಿ, ನಗರ್ತ ಗೆಳೆಯರ ಬಳಗ ಹಾಗೂ ಮಹಿಳಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

In English: The Ayodhyanagar Shivacharya Vaishya Nagartha Board celebrated the 64th year of its Ganesh Chaturthi festival at Sri Nagareshwara Swamy Temple, 1st Nagarthara Pete, Sidlaghatta, with five days of special pujas followed by a grand immersion procession on Saturday. The procession, accompanied by music troupes and large numbers of women, children, and youth, moved through the town’s main streets to Gudihalli lake, where the idol was immersed amid chants of Ganesha’s praise.

ಇದೇ ನಗರ್ತ ಮಂಡಳಿ ಈ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮದ ಬಗ್ಗೆ ತ್ರಿವಿದ ದಾಸೋಹಿ ಡಾ.ಶ್ರೀ.ಶಿವಕುಮಾರಮಹಾಸ್ವಾಮಿಗಳ 116ನೇ ಜನ್ಮದಿನಾಚರಣೆ ಎಂಬ ವರದಿಯನ್ನೂ ಓದಿ.

For Daily Updates WhatsApp ‘HI’ to 7406303366

error: Content is protected !!
Exit mobile version