Home News ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ

ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳ ವಿತರಣೆ

0
Bhavaikya Yuvajana Sangha Sidlaghatta

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ (Sadali), ಗಡಿಮಿಂಚೇನಹಳ್ಳಿ (Gadiminchenahalli), ಮುತ್ತೂರು (Muttur), ಸಿ.ಎನ್ ಹೊಸೂರು (C N Hosur), ಕಣಿತಹಳ್ಳಿಯ (Kanitahalli) ಒಟ್ಟು 6 ಸರ್ಕಾರಿ ಪ್ರಾಥಮಿಕ ಶಾಲೆಗಳ (Government Primary School) ವಿದ್ಯಾರ್ಥಿಗಳಿಗೆ ಶಾಲಾ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾವೈಕ್ಯ ಯುವಜನ ಸಂಘದ (Bhavaikya Yuvajana Sangha) ಸಂಸ್ಥಾಪಕ ಕೆ.ವಿ.ಪ್ರಜ್ವಲ್ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಲು ಪೋಷಕರು ಹಿಂದು ಮುಂದು ನೋಡುತ್ತಿದ್ದು, ಹೆಚ್ಚಾಗಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಹಲವು ಚಟುವಟುವಟಿಕೆಗಳನ್ನು ಮಕ್ಕಳಿಗೆ ಕಲಿಸುವುದರ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ.

ಅದರೊಂದಿಗೆ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಸಹ ಪೂರೈಕೆ ಮಾಡಿದಲ್ಲಿ ಅವರಿಗೆ ಇನ್ನಷ್ಟು ಸಹಾಯಕವಾಗುತ್ತದೆ ಎಂಬ ಉದ್ದೇಶದಿಂದ ಶಾಲಾ ಮಕ್ಕಳಿಗೆ ಶಾಲಾ ಸಲಕರಣೆಗಳನ್ನು ನೀಡುತ್ತಿರುವುದಾಗಿ ಅವರು ತಿಳಿಸಿದರು.

ಭಾವೈಕ್ಯ ಯುವಜನ ಸಂಘದ ಸದಸ್ಯರಾದ ಗೀತಾ, ಅನಿಲ್ ಶಾ ಮತ್ತಿತರರು ಒಟ್ಟು 217 ಶಾಲಾ ಮಕ್ಕಳಿಗೆ ಬಿಸ್ಕತ್ತು, ಪೆನ್, ಪೆನ್ಸಿಲ್, ಎರೇಸರ್, ಪುಸ್ತಕ ವಿತರಣೆ ಮಾಡಿದರು. ಸುಮೇರ್‌ಮಲ್‌ಜಿ ಚಂಪಾಲಾಲ್‌ಜಿ ಅವರು ಕೊಡುಗೆಯಾಗಿ ನೀಡಿದ ನೋಟ್‌ಬುಕ್‌ಗಳು ಮತ್ತು ಗುಣಾಕಾರ ಟೇಬಲ್ ಪುಸ್ತಕಗಳನ್ನು ವಿತರಿಸಿದರು.

ವರಲಕ್ಷ್ಮಿ ವಿಜಯಕುಮಾರ್, ಗ್ರಾಮಾಂತರ ಟ್ರಸ್ಟ್ ನ ಉಷ್ಟಾ ಶೆಟ್ಟಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version