Home News ಕೃಷ್ಣಮೃಗವನ್ನು ಕೊಂದು ತಿಂದವರು ಪೋಲೀಸರ ವಶಕ್ಕೆ

ಕೃಷ್ಣಮೃಗವನ್ನು ಕೊಂದು ತಿಂದವರು ಪೋಲೀಸರ ವಶಕ್ಕೆ

0
Sidlaghatta Poolakuntlahalli Blackbuck hunters arrest

Poolakuntlahalli, Sidlaghatta : ಶಿಡ್ಲಘಟ್ಟ ತಾಲೂಕು ಬಶೆಟ್ಟಹಳ್ಳಿ ಹೊಬಳಿ, ಪೂಲಕುಂಟಹಳ್ಳಿ ಗ್ರಾಮದ ತೋಟ ಒಂದರಲ್ಲಿ ಕೃಷ್ಣಮೃಗವನ್ನು ಉರುಳು ಹಾಕಿ ಸಾಯಿಸಿ ಅಡುಗೆ ಮಾಡಿ ತಿಂದ ವ್ಯಕ್ತಿಗಳನ್ನು ವಲಯ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರೆ.

ಶಿಡ್ಲಘಟ್ಟ ವಲಯ ಅರಣ್ಯ ಅಧಿಕಾರಿ ಸುಧಾಕರ್, ಎಸ್ ಎನ್ ಜಯಚಂದ್ರ ಉಪ ವಲಯ ಅರಣ್ಯ ಅಧಿಕಾರಿ, ಶಿಡ್ಲಘಟ್ಟ ಶಾಖೆ ಗೊವಿಂದರಾಜು ಜಿ ಜಿ ಹಳ್ಳಿ‌ ( ಗೊರ್ಲಗುಮ್ಮನಹಳ್ಲಿ) ಗಸ್ತು. ಹಾಗೂ ಸಿಬ್ಬಂದಿಗಳು ಅಪರಿಚಿತರಿಂದ ಮಾಹಿತಿ ಮೇರೇಗೆ ದಾಳಿ ನಡೆಸಿದ್ದು, ಕೃಷ್ಣಮೃಗವನ್ನ ಉರುಳು ಹಾಕಿ ಸಾಯಿಸಿ ಅಡುಗೆ ಮಾಡಿ ತಿಂದು ತೇಗಿರುವ ಮಾಹಿತಿ‌ ಮೇರೇಗೆ ಪರಿಶೀಲನೆ ನಡೆಸಲಾಗಿದ್ದು ಬಲೆ,ಉರುಳು, ಕೃಷ್ಣಮೃಗ ತಲೆ ಕಾಲು, ವಶಕ್ಕೆ ಪಡೆದಿದ್ದಾರೆ. ತಲೆ ಹಾಗೂ ಕಾಲುಗಳನ್ನು ನಾಳೆಗೆ ಎಂದು ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ. ಗಂಗಿರೆಡ್ಡಿ (57) ನಾಗೇಶ್ (45) ರನ್ನು ವಶಕ್ಕೆ ಪಡೆಯಲಾಗಿದೆ.

ಗಂಗಿರೆಡ್ಡಿ ತೊಟದಲ್ಲಿ ಕಲ್ಲಿನ ಚಪ್ಪಡಿ ಮನೆಯಲ್ಲಿ ಹುರುಳಿಗೆ ಬಿದ್ದಿರುವ ಜಿಂಕೆಯ ತಲೆ ಸಿಕ್ಕಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಅಪರಿಚತರಿಂದ ಬಂದ ಮಾಹಿತಿ ಮೇರೇಗೆ ವಿಚಾರಣೆ ಮಾಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಇದಕ್ಕೂ‌ ಮೊದಲು ಮೊಲಗಳನ್ನು ತಿಂದಿರುವುದಾಗಿ ಅವರು ಹೇಳಿಕೆ ಕೊಟ್ಟಿದ್ದಾರೆ. ಮೊಟ್ಟ ಮೊದಲ ಬಾರಿಗೆ ಜಿಂಕೆ ತಿಂದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಮೇಲ್ನೊಟಕ್ಕೆ ಕೃಷ್ಣಮೃಗವೆಂದು ಕಂಡುಬಂದಿದ್ದು, ಕೃಷ್ಣಮೃಗವಾ ಅಥವಾ ಜಿಂಕೆಯಾ ಎನ್ನುವುದು ಎಫ್ ಎಸ್ ಎಲ್ ಲ್ಯಾಬ್ ನಿಂದ ಬಯಲಿಗೆ ಬರಬೇಕಾಗಿದೆ.

ಶ್ರೀನಿವಾಸ್ ಎರಡೊನಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಉಪ ವಿಭಾಗ ಚಿಂತಾಮಣಿ, ಶಿಡ್ಲಘಟ್ಟ ವಲಯ ಅರಣ್ಯ ಅಧಿಕಾರಿ ಸುಧಾಕರ್, ಎಸ್ ಎನ್ ಜಯಚಂದ್ರ ಉಪ ವಲಯ ಅರಣ್ಯ ಅದಿಕಾರಿ ಶಿಡ್ಲಘಟ್ಟ ಶಾಖೆ. ಗೊವಿಂದರಾಜು, ಜಿ ಜಿ ಹಳ್ಳಿ‌ ( ಗೊರ್ಲಗುಮ್ಮನಹಳ್ಲಿ) ಗಸ್ತು ಹಾಗೂ ಸಿಬ್ಬಂದಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version