Home News ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಒತ್ತಾಯಿಸಿ ಪ್ರತಿಭಟನೆ

ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಒತ್ತಾಯಿಸಿ ಪ್ರತಿಭಟನೆ

Rajya Raita Sangha and Hasiru Sene Protest Against Inadequate Power Supply

0
Farmers protesting outside BESCOM office demanding adequate power supply for their agricultural pump sets.

Sidlaghatta : ಬಯಲುಸೀಮೆ ಭಾಗದ ಬಹುತೇಕ ರೈತರು ಸೇರಿದಂತೆ ರೇಷ್ಮೆ ಬೆಳೆಗಾರರು ಕೃಷಿ ಮಾಡಲು ಕೊಳವೆಬಾವಿಗಳನ್ನೇ ನಂಬಿಕೊಂಡಿದ್ದು ಸಮರ್ಪಕ ವಿದ್ಯುತ್ ಸರಬರಾಜಿಲ್ಲದೇ ಇತ್ತೀಚೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಹೇಳಿದರು.

ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಶುಕ್ರವಾರ ಬೆಸ್ಕಾಂ ಕಚೇರಿಯ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಕೃಷಿ ಪಂಪ್ ಸೆಟ್ ಹಾಗೂ ಮೋಟರ್‌ಗಳು ಪದೇ ಪದೇ ರಿಪೇರಿಯಾಗುತ್ತಿರುವುದಲ್ಲದೆ ರೈತರ ಬೆಳೆ ನಷ್ಟ ಆಗುತ್ತಿದೆ. ಹಾಗಾಗಿ ಕೂಡಲೇ ಸಮರ್ಪಕ ವಿದ್ಯುತ್ ಪೂರೈಸಲು ಇಲಾಖೆ ಮುಂದಾಗಬೇಕು ಇಲ್ಲವಾದಲ್ಲಿ ನೊಂದ ರೈತರು ಸೇರಿದಂತೆ ರೈತರು ಸಾಕಿರುವ ಧನ ಕರುಗಳ ಸಮೇತ ಬೆಸ್ಕಾಂ ಕಚೇರಿ ಮುಂಭಾಗ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಪದಾಧಿಕಾರಿಗಳಾದ ವೇಣುಗೋಪಾಲ್, ವೈ.ರಾಮಕೃಷ್ಣಪ್ಪ, ದೇವರಾಜ್, ಎ.ರಾಮಚಂದ್ರ, ಜಿ.ಎಂ.ಕೆಂಪಣ್ಣ, ಬೀರಪ್ಪ, ಮಂಜುನಾಥ, ರಾಜಣ್ಣ, ಹರೀಶ್ ಹಾಜರಿದ್ದರು.


Farmers Demand Adequate Power Supply for their Agricultural Pump Sets

Sidlaghatta : Tadur Manjunath, the President of the State Farmers’ Association and Green Army Taluk, has expressed concern over the struggles faced by farmers who rely on tube wells for their cultivation. In a recent protest led by the Rajya Raita Sangha and Hasiru Sene in front of the Bescom office, Manjunath demanded adequate power supply to farmers’ agricultural pump sets.

Manjunath highlighted that due to the inadequate power supply, farmers’ agricultural pump sets and motors are repeatedly breaking down, resulting in significant crop losses. He further warned that if the department does not immediately provide adequate electricity, farmers, including silk farmers, will be forced to protest violently in front of the BESCOM office, along with their cattle.

The protest was attended by B. Narayanaswamy, President of the Rajya Raita Sangha and Hasiru Sene City Unit, as well as office bearers Venugopal, Y. Ramakrishnappa, Devaraj, A. Ramachandra, GM Kempanna, Beerappa, Manjunath, Rajanna, and Harish.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version