Home News 38 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಬಾಬುಗೆ ಸಹುದ್ಯೋಗಿಗಳಿಂದ ಸನ್ಮಾನ

38 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಬಾಬುಗೆ ಸಹುದ್ಯೋಗಿಗಳಿಂದ ಸನ್ಮಾನ

0
Sidlaghatta BESCOM Employee Retirement Sendoff

Sidlaghatta : BESCOM ನಲ್ಲಿ ಸುದೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಹಿರಿಯ ಯಂತ್ರಕರ್ಮಿ ಮೆಹಬೂಬ್ ಪಾಷಾ ಅವರನ್ನು ದಂಪತಿ ಸೇಮತ ನಗರದ ಬೆಸ್ಕಾಂ ಕಚೇರಿಯಲ್ಲಿ ಬೆಸ್ಕಾಂನ ಸಹುದ್ಯೋಗಿ ಅಕಾರಿಗಳು ಹಾಗೂ ಸಿಬ್ಬಂದಿ ಸನ್ಮಾನಿಸಿ ಬೀಳ್ಕೊಟ್ಟರು.

ಈ ವೇಳೆ ಮಾತನಾಡಿದ ನಗರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯ ಪ್ರಕಾಶ್, ಇಲಾಖೆಯಲ್ಲಿ 38 ವರ್ಷಗಳ ಸುರ್ಘ ಸೇವೆ ಮಾಡಿದ ಹಿರಿಯ ಯಂತ್ರಕರ್ಮಿ ಮೆಹಬೂಬ್ ಪಾಷಾ ಬಾಬು ಅವರು ಗ್ರಾಹಕರು, ಸಾರ್ವಜನಿಕರಿಂದ ಉತ್ತಮ ಬಾಂಧವ್ಯ ಹೊಂದಿದ್ದರು.

ತಾವು ಮಾಡುವ ಕೆಲಸದಲ್ಲಿ ಸ್ವಲ್ಪ ಏರು ಪೇರು ಆದರೂ ಸಾರ್ವಜನಿಕರೊಂದಿಗೆ ನಾವು ಇಟ್ಟುಕೊಳ್ಳುವ ಒಡನಾಟ, ಉತ್ತಮ ಬಾಂಧವ್ಯವು ಅವೆಲ್ಲವನ್ನೂ ಮರೆಮಾಚಿ ಉತ್ತಮ ಸೇವೆ ಮಾಡಲು ನೆರವಾಗುತ್ತದೆ. ಸರ್ಕಾರಿ ನೌಕರರಿಗೆ ಮುಖ್ಯವಾಗಿ ತಾಳ್ಮೆ, ಸಹನೆ ಮುಖ್ಯವಾಗಿರಬೇಕು ಎಂದರು.

ಬಾಬು ಎಂದೆ ಎಲ್ಲರೂ ಕರೆಯುತ್ತಿದ್ದ ಮೆಹಬೂಬ್ ಪಾಷಾ ಅವರನ್ನು ದಂಪತಿ ಸಮೇತ ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಮಾಂತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಕಾರಿ ಪ್ರಭು, ಸಹಾಯಕ ಎಂಜಿನಿಯರ್‌ ಗಳಾದ ಚಂದ್ರಶೇಖರ್, ವೇದ ಕಿರಣ್, ಅನಂತಗೌಡ, ದಿಬ್ಬೂರಹಳ್ಳಿ ಘಟಕದ ಸಹಾಯಕ ಇಂಜಿನಿಯರ್ ಮುನಿರಾಜು, ಲೈನ್ ಮ್ಯಾನ್ ಸಂತೋಷ್, ಲಕ್ಷ್ಮಣ್, ಕಿಶೋರ್, ಗುತ್ತಿಗೆದಾರ ಕೃಷ್ಣಪ್ಪ, ನಾಗರಾಜು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version