Home News ನಿವೃತ್ತ ಶಿಕ್ಷಕ ವಿ.ಕೃಷ್ಣ ಅವರಿಗೆ ಶಾಲಾ ಆಡಳಿತದಿಂದ ಸನ್ಮಾನ

ನಿವೃತ್ತ ಶಿಕ್ಷಕ ವಿ.ಕೃಷ್ಣ ಅವರಿಗೆ ಶಾಲಾ ಆಡಳಿತದಿಂದ ಸನ್ಮಾನ

0
Sri Saraswati Convent School in Sidlaghatta town honours retired science teacher V. Krishna, recognising his achievements and contributions to education.

Sidlaghatta : ಈ ಜಗತ್ತಿನಲ್ಲಿ ನಾವು ಇಂದು ಏನಾಗಿದ್ದೇವೋ ಅದಕ್ಕೆ ನಮ್ಮ ಹೆತ್ತವರು ಎಷ್ಟು ಕಾರಣರೋ ನಮಗೆ ಅಕ್ಷರ ಕಲಿಸಿದ ಗುರುಗಳು ಸಹ ಅಷ್ಟೇ ಕಾರಣರಾಗಿದ್ದಾರೆ ಎಂದು ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯ ಅಧ್ಯಕ್ಷ ಎನ್.ಶ್ರೀಕಾಂತ್ ಅಭಿಪ್ರಾಯಪಟ್ಟರು.

ಶಿಡ್ಲಘಟ್ಟ ನಗರದ ಶ್ರೀಸರಸ್ವತಿ ಕಾನ್ವೆಂಟ್ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ವಿಜ್ಞಾನ ಶಿಕ್ಷಕ ವಿ.ಕೃಷ್ಣ ಅವರನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಿ ಅವರು ಮಾತನಾಡಿದರು.

ಶಾಲೆಯಲ್ಲಿ ಶಿಕ್ಷಕರಾಗಿ 36 ವರ್ಷ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾಗಿರುವ ವಿಜ್ಞಾನ ಶಿಕ್ಷಕ ವಿ.ಕೃಷ್ಣ ಅವರ ಸೇವೆ ಅನನ್ಯ, ಅವರ ನಿವೃತ್ತಿಯಿಂದ ನಮ್ಮ ವಿದ್ಯಾಸಂಸ್ಥೆಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಲಾಗದ ನಷ್ಟ ಆಗಿದೆ ಎಂದರೂ ತಪ್ಪಾಗಲಾರದು ಎಂದರು.

ಚಿಕ್ಕಬಳ್ಳಾಪರದ ಖ್ಯಾತ ವಕೀಲ ಟಿ.ಎಸ್.ವಿಜಯಶಂಕರ್ ಮಾತನಾಡಿ, ಶಿಕ್ಷಕ ವಿ.ಕೃಷ್ಣ ರವರು ಒಬ್ಬ ಪ್ರತಿಭಾವಂತ ಕ್ರಿಯಾಶೀಲ ಶಿಕ್ಷಕರಾಗಿದ್ದು ವಿಜ್ಞಾನ ವಿಚಾರ ಸಂಕೀರ್ಣ, ಅಶುಭಾಷಣ, ನಾಟಕಗಳಲ್ಲಿ ರಾಜ್ಯ ಮಟ್ಟದಲ್ಲಿ ಗುರ್ತಿಸಿಕೊಂಡಿರುತ್ತಾರೆ ಮತ್ತು ಸಾಕ್ಷರತಾ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಪನ್ಮೂಲ ವ್ಯೆಕ್ತಿಗಳಾಗಿ ಸೇವೆ ಸಲ್ಲಿಸಿರುತ್ತಾರೆ, ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಶಿಸ್ತಿನಿಂದ ಅಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ವ್ಯೆಕ್ತಿಗಳಾಗಿ ರೂಪಗೊಳ್ಳಬೇಕೆಂದು ಹೇಳಿದರು.

ವಿ.ಕೃಷ್ಣ ರವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಶಾಲೆಯು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಹಾಗೂ ಮಕ್ಕಳಲ್ಲಿ ಇರುವ ಪ್ರತಿಭೆಗಳನ್ನು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸಿಕೊಟ್ಟಿರುತ್ತದೆ.

ನಮ್ಮ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವೈದ್ಯರಾಗಿ ಸೇವೆಯನ್ನು ಸಲ್ಲಿಸುತ್ತಿರುವುದು ನಮ್ಮ ಶಾಲೆಗೆ ಹೆಮ್ಮೆ ತರುವ ವಿಚಾರವಾಗಿದೆ ಅವರಂತೆ ಎಲ್ಲಾ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಶಾಲೆ ಮತ್ತು ಊರಿಗೆ ಒಳ್ಳೆಯ ಹೆಸರನ್ನು ತರಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ವಿ.ಕೃಷ್ಣ ಅವರನ್ನು ದಂಪತಿ ಸಮೇತ ಸನ್ಮಾನಿಸಲಾಯಿತು.

ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆರ್.ನಾಗಲಕ್ಷ್ಮಿ , ಪ್ರೌಢಶಾಲೆ ಮುಖ್ಯ ಶಿಕ್ಷಕ ರಘು, ಆಂಗ್ಲಮಧ್ಯಮ ಶಾಲೆ ಮುಖ್ಯ ಶಿಕ್ಷಕಿ ರುಕ್ಮಣಿ, ನಿವೃತ್ತ ಮುಖ್ಯ ಶಿಕ್ಷಕ ಎಸ್.ಕೆ.ಗೋಪಿನಾಥ್, ಜಿ.ಎನ್.ಶಾಮಸುಂದರ್, ಸೌಭಾಗ್ಯಮ್ಮ, ಎಸ್.ಶಾರದಮ್ಮ, ಶಿಕ್ಷಕ ಪಟೇಲ್ ನಾರಾಯಣಸ್ವಾಮಿ, ಪಿ.ವಿ.ನಾರಾಯಣ ಕುಲಕರ್ಣಿ, ಎಸ್.ಜಿ.ಗಿರಿಜ, ಬಿ.ಉಷಾ, ಅಶ್ವಥ್‍ರೆಡ್ಡಿ, ಕೆ.ಮಂಜುನಾಥ್, ರೂಪಸಿ ರಮೇಶ್, ಹರೀಶ್, ವಿ.ನಾಗರಾಜು, ಕೆ.ವಿ.ಸುಬ್ಬಣ್ಣ ಟಿ.ರಮೇಶ್, ವೈಶಾಕ್ ಹಾಜರಿದ್ದರು.


Retired Science Teacher Honored by Sri Saraswati Convent School

Sidlaghatta : Retired science teacher V. Krishna was honoured by the management board of Sri Saraswati Convent School in Sidlaghatta town, with President N. Srikanth opining that teachers are just as responsible for their children’s success as parents.

At the event, lawyer T.S. Vijayashankar praised V. Krishna’s accomplishments, stating that the talented teacher had been recognised at the state level in science, bad language, drama and had served as a district resource person in the literacy movement program.

In response, V. Krishna expressed gratitude for the honour and credited the school for providing a platform to showcase the talents of its students. He also noted with pride that several former students were now serving as doctors at the national and international level.

The event was attended by Education Secretary R. Nagalakshmi, High School Head Teacher Raghu, English Medium School Head Teacher Rukmani, Retired Head Teacher S.K.Gopinath, and several other dignitaries and educators.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version