Home News ಗೌಡನಹಳ್ಳಿ ಸರ್ಕಾರಿ ಶಾಲೆಗೆ 2 ಲಕ್ಷ ರೂಗಳ ಆರ್ಥಿಕ ನೆರವು

ಗೌಡನಹಳ್ಳಿ ಸರ್ಕಾರಿ ಶಾಲೆಗೆ 2 ಲಕ್ಷ ರೂಗಳ ಆರ್ಥಿಕ ನೆರವು

0
Gowdanahalli Government School Durgam Trust Donation

Gowdanahalli, Sidlaghatta : ಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಸಮುದಾಯದವರ ಸಹಕಾರದೊಂದಿಗೆ ಉತ್ತಮ ವಾತಾವರಣ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಶಾಲೆಯ ಆವರಣದಲ್ಲಿ ರಂಗಮಂದಿರ ನಿರ್ಮಾಣಕ್ಕೆ ದುರ್ಗಂ ಟ್ರಸ್ಟಿನಿಂದ ಎರಡು ಲಕ್ಷ ರೂಗಳ ಆರ್ಥಿಕ ನೆರವನ್ನು ನೀಡುತ್ತಿದ್ದೇವೆ ಎಂದು ಪ್ರಕಾಶ್‌ ಬಿ ಬಾಬು ತಿಳಿಸಿದರು.

ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು, ಶಾಲೆಯ ಮಕ್ಕಳ ಜೊತೆ ಸಂವಾದ ನಡೆಸಿ ಅವರು ಮಾತನಾಡಿದರು.

ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಾಲೆಗೆ ಕೊಠಡಿಗಳ ಜೊತೆಯಲ್ಲಿ ಆಟದ ಮೈದಾನ, ರಂಗಮಂದಿರ ಕೂಡ ಅತ್ಯಗತ್ಯ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಜೊತೆಗೂಡಿ ಕೆಲಸ ಮಾಡೋಣ. ಆರೋಗ್ಯ,ಶಿಕ್ಷಣ ಮತ್ತು ಪರಿಸರಕ್ಕೆ ಸಂಬಂಧಿಸಿದ ಒಂದಷ್ಟು ಸಂಕೀರ್ಣಗಳನ್ನು ಏರ್ಪಡಿಸಿ ಜನೋಪಯೋಗಿ ಕಾರ್ಯಗಳನ್ನು ನಾವೆಲ್ಲರೂ ಒಟ್ಟಾಗಿ ಮಾಡೋಣ. ಜನರಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸೋಣ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಎಂ.ದೇವರಾಜ್ ಮಾತನಾಡಿ, ಬಶೆಟ್ಟಹಳ್ಳಿಯ ಸರ್ವಮಂಗಳ ದುರ್ಗಂ ಮತ್ತು ಬಸವರಾಜ ದುರ್ಗಂ ಅವರ ಮಗ ಪ್ರಕಾಶ್‌ ಬಿ ಬಾಬು ಮತ್ತು ರತ್ನಬಾಬು ರವರು ತಮ್ಮ ತಾಯಿಯ ಆಸೆಯಂತೆ ತಮ್ಮ ಸಂಪತ್ತನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗ ಮಾಡುವ ಮೂಲಕ ಜನರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಈ ದಂಪತಿ ತಾವು ಗಳಿಸಿರುವ ಸಂಪಾದನೆ ಮತ್ತು ತಂದೆ ತಾಯಿಗಳಿಂದ ಬಂದಂತಹ ಆಸ್ತಿಯನ್ನು ಬಶೆಟ್ಟಹಳ್ಳಿ ಹೋಬಳಿಯ 16 ಹಳ್ಳಿಗಳ ಪ್ರಗತಿಗಾಗಿ ವಿನಿಯೋಗಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಡಿ.ಮಂಜುನಾಥ. ಜಿ.ಆರ್.ವೆಂಕಟರೆಡ್ಡಿ, ಚಿಕ್ಕ ವೆಂಕಟರೆಡ್ಡಿ, ಗಜೇಂದ್ರ, ಮುನಿಕೃಷ್ಣಪ್ಪ, ಶಿಕ್ಷಕರಾದ ವಿ.ಎಂ.ಮಂಜುನಾಥ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version