Home News ರಾಜಕಾಲುವೆ ಒತ್ತುವರಿಯಿಂದ ಮನೆಗಳಿಗೆ ನುಗ್ಗಿದ ನೀರು

ರಾಜಕಾಲುವೆ ಒತ್ತುವರಿಯಿಂದ ಮನೆಗಳಿಗೆ ನುಗ್ಗಿದ ನೀರು

0
H Cross Drainage Water Clogging Sidlaghatta Taluk

ಶಿಡ್ಲಘಟ್ಟ ತಾಲ್ಲೂಕಿನ ಕುಂಭಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಎಚ್ ಕ್ರಾಸ್ ಗ್ರಾಮದಲ್ಲಿ ಇದ್ದ ರಾಜ ಕಾಲುವೆ (ಸುಮಾರು 30 ಅಡಿ‌ ಇದ್ದ ಕಾಲುವೆ ಈಗ ಮುಚ್ಚಿ ಹೋಗಿ 4 ಅಡಿಯಾಗಿದೆ)  ಮುಚ್ಚಿ ಹೋಗಿದ್ದು, ಶುಕ್ರವಾರ ಮಳೆ ಬಿದ್ದ ಕಾರಣ ಕಾಲುವೆಯಲ್ಲಿ ಹರಿಯಬೇಕಾದ ನೀರಿನ  ರಭಸ ಹೆಚ್ಚಾಗಿ ಗ್ರಾಮದ ಸುಮಾರು 50 ರಿಂದ 60 ಮನೆಗಳಿಗೆ ನೀರು ನುಗ್ಗಿ ವಾಸ ಮಾಡಲು ಆಗದ ಪರಿಸ್ಥಿತಿ ಏದುರಾಗಿದೆ.

 ಈ ವಿಚಾರವಾಗಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ  ಹಾಗೂ ಸಂಬಂಧಿಸಿದ ಪಂಚಾಯತಿ ಅಧಿಕಾರಿಗಳಿಗೆ ರಾಜ‌ಕಾಲುವೆಯನ್ನು ಸ್ವಚ್ಛಗೊಳಿಸುವಂತೆ  2010 ರಿಂದ ಇಲ್ಲಿಯವರೆಗೆ ಸುಮಾರು ಅರ್ಜಿಗಳನ್ನು ಸಲ್ಲಿಸಿದ್ದರು  ಇದುವರೆಗೂ ಯಾರೋಬ್ಬರು  ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ  ಅದರ ಪರಿಣಾಮವಾಗಿ ನಾವು ಇಂದು ಮನೆಯಲ್ಲಿ ವಾಸ ಮಾಡಲು ಆಗದ ಪರಿಸ್ಥಿತಿ‌ ಎದುರಾಗಿದೆ  ಎಂದು ಸ್ಥಳೀಯರು ತಮ್ಮ ಆಳಲನ್ನು  ತೊಡಿಕೊಂಡಿದ್ದಾರೆ.

ಇದಲ್ಲದೇ  ಈ ವಿಚಾರಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಈಗಲಾದರೂ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಲಿ ಎಂದು ತೊಂದರೆಗೊಳಗಾದ ನಾರಾಯಣಮೂರ್ತಿ, ಮಂಜುನಾಥ್, ಕೆ.ಎಸ್.ಬಸವರಾಜ್, ಪರಮೇಶ್, ಶಿವಣ್ಣ, ವೀರಭದ್ರಣ್ಣ, ಮಧು, ಈಶ್ವರಣ್ಣ ಮನವಿ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version