Home News ಕೆರೆ ಕೋಡಿ ಹರಿದು ಅಬ್ಲೂಡು ಗ್ರಾಮದ ಮನೆಗಳಿಗೆ ನುಗ್ಗಿದ ನೀರು

ಕೆರೆ ಕೋಡಿ ಹರಿದು ಅಬ್ಲೂಡು ಗ್ರಾಮದ ಮನೆಗಳಿಗೆ ನುಗ್ಗಿದ ನೀರು

0
Sidlaghatta Gudihalli Rain Water

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಈಚೆಗೆ ಬಿದ್ದ ಮಳೆಗೆ ಗುಡಿಹಳ್ಳಿ ಅಬ್ಲೂಡು ಕೆರೆಯು ತುಂಬಿಹೋಗಿ ಕೋಡಿ ಹರಿದಿದೆ. ಇದರ ಪರಿಣಾಮ ಅಬ್ಲೂಡು ಗ್ರಾಮದಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳಂತೂ ಸುತ್ತ ನೀರು ನಿಂತ ಪರಿಣಾಮ ದ್ವೀಪದಂತಾಗಿವೆ.

 ಗುಡಿಹಳ್ಳಿ ಅಬ್ಲೂಡು ಕೆರೆಯ ಕೋಡಿಯು ಗುಡಿಹಳ್ಳಿ ಗ್ರಾಮದ ಬಳಿ ಮತ್ತು ಅಬ್ಲೂಡು ಗ್ರಾಮದ ಬಳಿ, ಎರಡೂ ಕಡೆ ಕೋಡಿ ಹರಿಯುತ್ತಿದೆ. ಗುಡಿಹಳ್ಳಿ ಬಳಿ ಕೋಡಿ ಹರಿದರೆ ಆ ನೀರು ಅಮ್ಮನಕೆರೆಗೆ ಹರಿಯುತ್ತದೆ. ಅದೇ ಅಬ್ಲೂಡಿನ ಬಳಿ ಕೋಡಿ ಹರಿದರೆ ಬಂಡೆಮ್ಮನ ಕೆರೆಗೆ ಹೋಗಿ ತಲಕಾಯಲಬೆಟ್ಟ ಏಟಿ ಮೂಲಕ ಆಂಧ್ರಕ್ಕೆ ಹೋಗುತ್ತದೆ.

 ಅಬ್ಲೂಡು ಗ್ರಾಮದ ಬಳಿ ನೀರು ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆಂದು ಕೆಲ ಗ್ರಾಮಸ್ಥರು ತಮ್ಮ ಖರ್ಚಿನಲ್ಲಿಯೇ ಎಂ ಸ್ಯಾಂಡ್ ತಂದು ಮೂಟೆಗಳನ್ನು ಮಾಡಿ ನೀರು ಹರಿಯುವುದನ್ನು ತಡೆಯೊಡ್ಡಿದ್ದರು. ಆದರೆ ಕೆರೆಯ ನೀರು ತುಂಬಿ ರಭಸ ಹೆಚ್ಚಿದ ಪರಿಣಾಮ ಕಟ್ಟೆ ಒಡೆಯುವ ಭೀತಿಯಿಂದ ಇಡೀ ಗ್ರಾಮವೇ ಮುಳುಗಡೆಯಾಗುತ್ತದೆ ಎಂದು ಮತ್ತೆ ಜನರೇ ಆ ಎಂ ಸ್ಯಾಂಡ್ ಮೂಟೆಗಳನ್ನು ತೆರವುಗೊಳಿಸಿದರು. ಈಗ ನೀರು ನುಗ್ಗಿ ಹಲವು ಮನೆಗಳು ಜಲಾವೃತಗೊಂಡಿವೆ.

 “ಈ ರೀತಿಯ ನೀರನ್ನು ನೋಡಿ ಬಹುಶಃ ನಲವತ್ತು ವರ್ಷಗಳಾಗಿತ್ತು. ಎಚ್.ಎನ್ ವ್ಯಾಲಿ ನೀರು ತಾಲ್ಲೂಕಿನಲ್ಲಿ ಮೊಟ್ಟಮೊದಲು ಬಂದಿದ್ದೇ ಈ ಕೆರೆಗೆ. ನೀರು ತುಂಬಿದ್ದ ಕೆರೆಗೆ ಈಚೆಗೆ ಚಿಕ್ಕಬಳ್ಳಾಪುರ ಹಾಗೂ ನಮ್ಮ ಭಾಗದಲ್ಲಿ ಬಿದ್ದ ಹೆಚ್ಚಿನ ಮಳೆನೀರು ದಿಬ್ಬೂರು, ಕತ್ತರಗುಪ್ಪೆ ಹಾಗೂ ಅಂಗರೇಕನಹಳ್ಳಿ ಮಾರ್ಗವಾಗಿ ನೀರು ಹರಿದುಬಂತು. ಕೆರೆಯು ಕೋಡಿ ಹರಿದರೆ ಎಂದು ಹಿಂದಿನವರು ಮಾಡಿದ್ದ ರಾಜಕಾಲುವೆ ಸುಮಾರು 33 ಅಡಿ ಇತ್ತು . ಅದನ್ನು ಒತ್ತುವರಿ ಮಾಡಿದ್ದು, ನೀರು ಸರಾಗವಾಗಿ ಹರಿಯಲು ಆಗದಂತಾಗಿದೆ. ಹಾಗಾಗಿ ನೀರೆಲ್ಲಾ ಮನೆಗಳಿಗೆ ನುಗ್ಗುತ್ತಿದೆ. ಈಗಲಾದರೂ ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡಿ, ಭವಿಷ್ಯದಲ್ಲಿ ಈ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು” ಎಂದು ರೈತ ಆರ್.ದೇವರಾಜ್ ತಿಳಿಸಿದರು.

“ನಮ್ಮ ಕೆರೆ ಕೋಡಿ ಹರಿದು ಸುಮಾರು 33 ವರ್ಷವಾಗಿದೆ. ಇಂದು ಕೆರೆ ತುಂಬಿ ಕೋಡಿ ಹರಿದಿರುವುದು ಸುತ್ತಮುತ್ತಲ ಜನಕ್ಕೆ ಸಂತಸ ತಂದಿದೆ. ಸುತ್ತಮುತ್ತಲು ಕೊಳವೆಬಾವಿ ಹಾಗೂ ಕೆರೆ ಅಚ್ಚುಕಟ್ಟುದಾರರಿಗೆ ಸಂತೋಷ ತಂದಿದೆ. ಕೆರೆ ಕೋಡಿ ಹರಿದು, ರಸ್ತೆ ಅವ್ಯವಸ್ಥೆ ಆಗಿರುವುದರ ಬಗ್ಗೆ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಸರಿಪಡಿಸಬೇಕು” ಎಂದು ಗುಡಿಹಳ್ಳಿ ಗ್ರಾಮದ ಮುಖಂಡ ಒತ್ತಾಯಿಸಿದರು.

ಕೆರೆ ಕೋಡಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗೆ ಹರಿಯುತ್ತಿದೆ. ಸುಮಾರು 30 ಹಳ್ಳಿ ಜನರಿಗೆ ರಸ್ತೆ ಸಂಚಾರಕ್ಕೆ ತೊಂದರೆಯಾಗಿ ಸುಮಾರು 8 ಕಿಲೋಮೀಟರ್ ಸುತ್ತಿಕೊಂಡು ಬೇರೆ ದಾರಿ ಮೂಲಕ ಸಂಚರಿಸಬೇಕಾಗಿದೆ. ಈ ಭಾಗದಲ್ಲಿ ರೈತಾಪಿ ವರ್ಗದವರು ಇದ್ದು, ಈ ರಸ್ತೆ ಮೂಲಕ ಚಿಕ್ಕಬಳ್ಳಾಪುರ ಎಪಿಎಂಸಿ ಮಾರ್ಕೆಟ್ ಗೆ ಹೋಗಬೇಕೆಂದರೆ ಬಳಸುದಾರಿಯಲ್ಲಿ ಹೋಗಬೇಕಾದ ಪರಿಸ್ಥಿತಿಯಿದೆ. ಈಗಿನ ತೈಲಬೆಲೆಗಳಲ್ಲಿ ರೈತಾಪಿ ಜನಕ್ಕೆ ಕಷ್ಟಕರವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇದರ ಕಡೆ ಗಮನ ಹರಿಸಿ ಸುಗಮವಾಗಿ ನೀರು ಹರಿಯಲು ಮೋರಿ ವ್ಯವಸ್ಥೆ ಮಾಡಿಕೊಡಬೇಕೆಂದು ಅವರು ಆಗ್ರಹಿಸಿದರು.

ಈಚೆಗೆ ಬಿದ್ದ ಮಳೆಗೆ ತಾಲ್ಲೂಕಿನ ಗುಡಿಹಳ್ಳಿ ಅಬ್ಲೂಡು ಕೆರೆಯು ತುಂಬಿಹೋಗಿ ಕೋಡಿ ಹರಿದಿದೆ. ಇದರ ಪರಿಣಾಮ ಅಬ್ಲೂಡು ಗ್ರಾಮದಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಕೆಲವು ಮನೆಗಳಂತೂ ಸುತ್ತ ನೀರು ನಿಂತ ಪರಿಣಾಮ ದ್ವೀಪದಂತಾಗಿವೆ.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version