ಪೂರ್ಣ ಪುಟ · Open full page
News

ಗೃಹರಕ್ಷಕದಳ ಸಿಬ್ಬಂದಿಯಿಂದ ಬೈಕ್ ರ್ಯಾಲಿ

Sidlaghatta Motor Vehicle Helmet Awareness Safety

ನಗರದ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಅಖಿಲ ಭಾರತ ಗೃಹ ರಕ್ಷಕದಳ ದಿನಾಚರಣೆ ಅಂಗವಾಗಿ ಕರ್ನಾಟಕ ಗೃಹ ರಕ್ಷಕ ಮತ್ತು ಪೌರ ರಕ್ಷಣಾ ಇಲಾಖೆ ಶಿಡ್ಲಘಟ್ಟ ಘಟಕದಿಂದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಗೃಹ ರಕ್ಷಕದಳದ ತಾಲ್ಲೂಕು ಘಟಕ ಅಧಿಕಾರಿ ನಾರಾಯಣಸ್ವಾಮಿ ಮಾತನಾಡಿದರು.

ಗೃಹರಕ್ಷಕರು ಅಗ್ನಿಶಮನ ಮತ್ತು ಕಾನೂನು ಸುವ್ಯವಸ್ಥೆ ಕರ್ತವ್ಯ ಅಲ್ಲದೇ ಇತರ ಯಾವುದೇ ಇಲಾಖೆಗೆ ನಿಯೋಜಿಸಿದರೂ ಆ ಇಲಾಖೆಗೆ ಸಂಬಂಧಪಟ್ಟ ಕೆಲಸವನ್ನು ಮಾಡುವಲ್ಲಿ ಸಮರ್ಥರಾಗಿದ್ದೇವೆ ಎಂದು ಅವರು ಹೇಳಿದರು.

   ಸಮಾಜದಲ್ಲಿ ಗೃಹರಕ್ಷಕದಳ ಸಿಬ್ಬಂದಿಯ ಸೇವೆ ಶ್ಲಾಘನೀಯವಾದದ್ದು, ಗೃಹ ರಕ್ಷಕ ದಳವನ್ನು 1962 ರಲ್ಲಿ ಸ್ಥಾಪನೆ ಮಾಡಲಾಯಿತು. ಅಂದಿನಿಂದ ಇಂದಿನವರೆಗೆ ಗೃಹರಕ್ಷಕ ದಳದ ಸಿಬ್ಬಂದಿ ಪೊಲೀಸ್ ಇಲಾಖೆಯೊಂದಿಗೆ ಸಮಾಜದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಿಂದೆ ಸ್ವಯಂ ಸೇವಕರಾಗಿ ದುಡಿಯಲು ಗೃಹರಕ್ಷಕ ದಳಕ್ಕೆ ಸೇರುವ ಜನರ ಸಂಖ್ಯೆ ವಿರಳವಾಗಿತ್ತು. ಆದರೆ ಕಾಲಕ್ರಮೇಣ ಭಾರತೀಯ ಸೈನ್ಯ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇದ್ದು, ಅವಕಾಶದಿಂದ ವಂಚಿತರಾದವರು, ಗೃಹರಕ್ಷಕ ಸೇರಿದರೆ ಸೈನಿಕ, ಪೊಲೀಸರಂತೆ ಕೆಲಸ ಮಾಡಬಹುದು ಎಂಬ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಗೃಹರಕ್ಷಕ ದಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ ಎಂದರು.

  ಪೊಲೀಸ್ ಇಲಾಖೆಯು ಕೂಡ ಕಂಪ್ಯೂಟರ್, ಸಿಸಿಟಿವಿ ಆಪರೇಟರ್, ಸಂಚಾರ ನಿಯಂತ್ರಕ, ವಾಹನ ಚಾಲಕ ಮುಂತಾದ ಕ್ಷೇತ್ರಗಳಲ್ಲಿ ಪೊಲೀಸ್ ಸಮವಸ್ತ್ರ ಸಮೇತ ಸೇವೆ ಮಾಡಲು ಗೃಹರಕ್ಷಕರಿಗೆ ಅವಕಾಶ ನೀಡುತ್ತಿದೆ. ಪ್ರಕೃತಿ ವಿಕೋಪದ ಸಂದರ್ಭ ಹಾಗೂ ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕ ದಳದ ಸ್ವಯಂ ಸೇವಕರ ತ್ಯಾಗ ಮೆಚ್ಚುವಂಥದ್ದು ಎಂದರು.

 ಗೃಹರಕ್ಷಕದಳ ಸಿಬ್ಬಂದಿ ಬೈಕ್ ರ‍್ಯಾಲಿಯ ಮೂಲಕ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

News

ಶಿಡ್ಲಘಟ್ಟದಲ್ಲಿ ಹೆಲ್ಮೆಟ್ ಕಡ್ಡಾಯ ಕಟ್ಟುನಿಟ್ಟಿನ ಜಾರಿ; ಪೊಲೀಸ್ ಪೇದೆಗೂ ದಂಡ

Sidlaghatta : ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ಡಿಸೆಂಬರ್ 12, ಶುಕ್ರವಾರದಿಂದ ಕಟ್ಟುನಿಟ್ಟಾಗಿ ಜಾರಿಯಾಗಿದ್ದು, ಶಿಡ್ಲಘಟ್ಟ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊದಲ ದಿನವೇ…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

News

ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ; ಆಟೋ ಚಾಲಕರು ಸಮವಸ್ತ್ರ ಧರಿಸಿ

Sidlaghatta : ದ್ವಿಚಕ್ರ ವಾಹನ ಸವಾರರು ಕೇವಲ ಕಾನೂನಿನ ಭಯಕ್ಕೆ ಹೆಲ್ಮೆಟ್ ಧರಿಸುವುದರ ಬದಲು, ತಮ್ಮ ಮತ್ತು ತಮ್ಮ ಮೇಲೆ ಆಧಾರವಾಗಿರುವ ಕುಟುಂಬದವರ ಹಿತದೃಷ್ಟಿಯಿಂದ…

Share
Exit mobile version