Sidlaghatta, chikkballapur : ಶಿಡ್ಲಘಟ್ಟ ನಗರ ಪೊಲೀಸ್ ವಲಯದ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ನಗರ ವ್ಯಾಪ್ತಿಯ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಮುಖ್ಯಸ್ಥರ ಸಭೆ ನಡೆಯಿತು. ಶಾಲಾ ವಾಹನಗಳ ಸುರಕ್ಷತೆ, ಚಾಲಕರ ಅರ್ಹತೆ ಮತ್ತು ದಾಖಲೆಗಳ ಪರಿಶೀಲನೆ ಕುರಿತಂತೆ ಈ ಸಭೆಯಲ್ಲಿ ಚರ್ಚೆ ನಡೆಯಿತು.
ಇತ್ತೀಚೆಗೆ ಚೇಳೂರು ಸಮೀಪ ಖಾಸಗಿ ಶಾಲಾ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರು ಮೃತಪಟ್ಟಿದ್ದರಿಂದ ಜಿಲ್ಲಾದ್ಯಂತ ಶಾಲಾ ವಾಹನಗಳ ಸುರಕ್ಷತಾ ಕ್ರಮಗಳ ಪರಿಶೀಲನೆ ಆರಂಭಿಸಲಾಗಿದೆ. ಇದರ ಭಾಗವಾಗಿ ಶಾಲಾ ವಾಹನಗಳ ತಾಂತ್ರಿಕ ಸ್ಥಿತಿ, ಚಾಲಕರ ತರಬೇತಿ, ಚಾಲನಾ ಪರವಾನಗಿ ಮತ್ತು ದಾಖಲೆಗಳ ನಿಖರ ನಿರ್ವಹಣೆ ಕುರಿತಂತೆ ಅಧಿಕಾರಿಗಳು ಚರ್ಚಿಸಿದರು.
ಸಭೆಯಲ್ಲಿ ಶಿಡ್ಲಘಟ್ಟ ನಗರ ವ್ಯಾಪ್ತಿಯ ಎಲ್ಲಾ ಶಾಲಾ ಮುಖ್ಯಸ್ಥರು ಹಾಜರಿದ್ದರು. ಮಂಗಳವಾರ ಬೆಳಗ್ಗೆ ಡಾಲ್ಫಿನ್ ಕಾಲೇಜಿನಲ್ಲಿ ನಗರದ ಎಲ್ಲಾ ಶಾಲೆ ಹಾಗೂ ಕಾಲೇಜುಗಳ ಮುಖ್ಯಸ್ಥರು ಮತ್ತು ವಾಹನ ಚಾಲಕರ ಸಭೆ ನಡೆಸಲು ತೀರ್ಮಾನಿಸಲಾಯಿತು.
ಈ ಸಭೆಗೆ ಚಾಲಕರು ದೈಹಿಕ ಸದೃಢತೆಯ ಪ್ರಮಾಣಪತ್ರ, ಚಾಲನಾ ಪರವಾನಗಿ ಹಾಗೂ ವಾಹನಗಳ ದಾಖಲೆಗಳೊಂದಿಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದರು. ಸಭೆಯಲ್ಲಿ ಡಿವೈಎಸ್ಪಿ ಮುರಳೀಧರ್, ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್, ಎಸ್.ಐ ವೇಣುಗೋಪಾಲ್ ಹಾಗೂ ನಗರದಲ್ಲಿನ ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
