Home News ಸರ್ಕಾರಿ ಆಸ್ಪತ್ರೆಯಲ್ಲಿ 80 ಲಕ್ಷ ರೂ ವೆಚ್ಚದ ಹೈಟೆಕ್ ಲ್ಯಾಬ್

ಸರ್ಕಾರಿ ಆಸ್ಪತ್ರೆಯಲ್ಲಿ 80 ಲಕ್ಷ ರೂ ವೆಚ್ಚದ ಹೈಟೆಕ್ ಲ್ಯಾಬ್

0
Sidlaghatta Govt Hospital Hitech Lab Testing Laboratory

ಶಿಡ್ಲಘಟ್ಟ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಆಮ್ಲಜನಕ ಘಟಕ ಹಾಗೂ ಹೈಟೆಕ್ ಲ್ಯಾಬ್ ಗಳ ಪೂರ್ವಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.

ಕೊರೊನಾ ಮೂರನೇ ಅಲೆ ಬರುತ್ತಿದೆ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ಆರೋಗ್ಯ ಇಲಾಖೆ ಸಕಲ ರೀತಿಯಲ್ಲಿ ಸನ್ನದ್ಧರಾಗಿರಬೇಕು. ಕೊರೊನಾ ಪರೀಕ್ಷೆಗಾಗಿ ಇದುವರೆಗೂ ಜಿಲ್ಲಾ ಕೇಂದ್ರಕ್ಕೆ ಎಡತಾಕಬೇಕಿತ್ತು. ಈಗ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಎಂಬತ್ತು ಲಕ್ಷ ರೂಗಳ ವೆಚ್ಚದ ಹೈಟೆಕ್ ಲ್ಯಾಬನ್ನು ತಮ್ಮ ಅನುದಾನದಲ್ಲಿ ಸಿದ್ಧಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸೇರಿದಂತೆ ಹಲವಾರು ಖಾಯಿಲೆಗಳಿಗೆ ಸಂಬಂಧಿಸಿದಂತೆ ರೋಗಿಗಳು ಬೇರೆಡೆಗೆ ಹೋಗದೇ ಇಲ್ಲಿಯೇ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ಇದೀಗ ಆಟೋ ಅನಲೈಜರ್ಸ್ ಯಂತ್ರಗಳನ್ನು ಖರೀದಿಸಿದ್ದು, ಥೈರಾಯ್ಡ್, ಲಿವರ್, ಕಿಡ್ನಿ, ಕೊರೊನಾ ಮಾರ್ಕರ್ಸ್ ಮುಂತಾದ ಪರೀಕ್ಷೆಗಳನ್ನು ಇನ್ನು ಮುಂದಿನ ದಿನಗಳಲ್ಲಿ ಇಲ್ಲಿನ ಹೈಟೆಕ್ ಲಾಬ್ ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಮೂರನೇ ಅಲೆ ತಡೆಗಟ್ಟಬೇಕಾದರೆ ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣ ಸ್ವಾಬ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.

 ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಜಿಲ್ಲಾಮಟ್ಟದ ಸಿ.ಎಸ್.ಆರ್ ಅನುದಾನದಿಂದ ನಿರ್ಮಾಣವಾಗುತ್ತಿರುವ ಆಮ್ಲಜನಕ ತಯಾರಿಕಾ ಘಟಕದ ನೆಲಹಾಸು ಮತ್ತು ಶೆಡ್ ಸಿದ್ಧವಾಗಿದೆ. ಗುಜರಾತ್ ನಿಂದ ಆಮ್ಲಜನಕ ತಯಾರಿಕಾ ಯಂತ್ರ ಬರಲಿದೆ. ತಾಲ್ಲೂಕಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಮೂರು ಕೋವಿಡ್ ಕೇರ್ ಸೆಂಟರುಗಳಲ್ಲಿ ಎರಡನ್ನು ಮುಚ್ಚಿದ್ದೇವೆ. ಸುಂಡ್ರಹಳ್ಳಿಯದ್ದು ಮಾತ್ರ ಉಳಿಸಿಕೊಂಡಿದ್ದೇವೆ. ಆದರೂ ಅಕಸ್ಮಾತ್ ಮೂರನೇ ಅಲೆ ಬಂದರೆ ಎಂದು ಎರಡು ಸೆಂಟರುಗಳನ್ನು ಸ್ಯಾನಿಟೈಸ್ ಮಾಡಿರಿಸಿದ್ದೇವೆ. ಜ್ವರ, ಮೈಕೈನೋವು ಯಾರಿಗೇ ಬಂದರೂ ಸ್ವಾಬ್ ಪರೀಕ್ಷೆ ಮಾಡುತ್ತಿದ್ದೇವೆ. ಈಗಲೂ ದಿನನಿತ್ಯ 800 ರಿಂದ 900 ಸ್ವಾಬ್ ಪರೀಕ್ಷೆ ತಾಲ್ಲೂಕಿನಲ್ಲಿ ನಡೆಸುತ್ತಿದ್ದೇವೆ ಎಂದು ಹೇಳಿದರು.

 ಆಮ್ಲಜನಕದ 92 ಸಿಲಿಂಡರುಗಳು ನಮ್ಮಲ್ಲಿವೆ. ಮೊದಲಾದರೆ ಪ್ರತಿನಿತ್ಯ 40 ರಿಂದ 45 ಸಿಲಿಂಡರುಗಳನ್ನು ಉಪಯೋಗಿಸುತ್ತಿದ್ದೆವು. ಆದರೆ ಈಗ 4 ರಿಂದ 5 ಅಷ್ಟೇ ಉಪಯೋಗಿಸುತ್ತಿದ್ದೇವೆ. ಕೊರೊನಾ ಸೋಮ್ಕಿತರು ಕೇವಲ 100 ಮಂದಿಯಿದ್ದಾರೆ. ಕೊರೊನಾ ಸೋಂಕಿನ ತೀವ್ರತೆಯುಳ್ಳ ರೋಗಿಗಳು ಇಲ್ಲದಿರುವುದು ಸಂತಸದ ವಿಚಾರ. ಮುಂದಿನ ವರ್ಷದೊಳಗೆ ನಮಗೆ ಸಿ.ಟಿ.ಸ್ಕ್ಯಾನ್ ಯಂತ್ರವನ್ನು ತರಿಸಿಕೊಡಿ, ತುಂಬಾ ಅನುಕೂಲವಾಗುತ್ತದೆ ಎಂದು ಶಾಸಕರಿಗೆ ಮನವಿ ಮಾಡಿದರು.

 ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್ ದೇವರಾಜ, ಸಿಬ್ಬಂದಿಗಳಾದ ಶಶಿಕುಮಾರ್, ಸುನಿಲ್, ನಂದಿನಿ, ಚೈತ್ರ, ಅಪ್ರೋಜ್, ಕೀರ್ತಿ, ರಜಿನಿ, ಚೇತನ್, ಕೃಷ್ಣಪ್ಪ ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version