Home News ಶಿಡ್ಲಘಟ್ಟದಲ್ಲಿ ಸ್ವತಂತ್ರ ಅಭ್ಯರ್ಥಿ ಪುಟ್ಟು ಆಂಜಿನಪ್ಪ ಪ್ರಚಾರ

ಶಿಡ್ಲಘಟ್ಟದಲ್ಲಿ ಸ್ವತಂತ್ರ ಅಭ್ಯರ್ಥಿ ಪುಟ್ಟು ಆಂಜಿನಪ್ಪ ಪ್ರಚಾರ

Anjinappa's Door-to-Door Campaign Stresses Integrity and People's Well-being

0
Independent candidate Puttu Anjinappa addressing a gathering during his door-to-door campaign in Sidlaghatta.

Sidlaghatta : ಶಿಡ್ಲಘಟ್ಟ ಕ್ಷೇತ್ರದ ಮತದಾರರು ಸ್ವಾಭಿಮಾನಿಗಳು. ಅವರು ಹಣ ಹೆಂಡದ ಆಮಿಷಕ್ಕೆ ಒಳಗಾಗದೆ ಉತ್ತಮ ವ್ಯಕ್ತಿತ್ವದ ಹಾಗೂ ಕ್ಷೇತ್ರದ ಜನರ ಹಿತಕಾಯುವ ವ್ಯಕ್ತಿಗೆ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಸ್ವತಂತ್ರ ಅಭ್ಯರ್ಥಿ ಪುಟ್ಟು ಆಂಜಿನಪ್ಪ ತಿಳಿಸಿದರು.

ಶಿಡ್ಲಘಟ್ಟ ನಗರದಲ್ಲಿ ಸ್ವತಂತ್ರ ಅಭ್ಯರ್ಥಿ ಪುಟ್ಟು ಆಂಜಿನಪ್ಪ ಅವರು ಮನೆ ಮನೆಗೂ ಭೇಟಿ ನೀಡಿ ಮತಯಾಚನೆ ಮಾಡಿದರು.

ಶಿಡ್ಲಘಟ್ಟ ನಗರದ ಮಯೂರ ವೃತ್ತ, ಶಾಮಣ್ಣ ಬಾವಿ ರಸ್ತೆ, ಕಾಮಾಟಿಗರ ಪೇಟೆ ಸೇರಿ ಹಲವು ಬಡಾವಣೆಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಮನೆ ಮನೆಗೂ ಭೇಟಿ ನೀಡಿ ತನಗೆ ಮತ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಪುಟ್ಟು ಆಂಜಿನಪ್ಪ ಅವರನ್ನು ಹೂ ಹಾರ ಹಾಕಿ ಆರತಿ ಬೆಳಗಿ ಬರಮಾಡಿಕೊಂಡರು. ನಂತರ ಮಾತನಾಡಿದ ಪುಟ್ಟು ಆಂಜಿನಪ್ಪ, ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ, ಕಳೆದ ಎಂಟು ವರ್ಷಗಳಿಂದಲೂ ಜನರ ಸೇವೆ ಮಾಡುತ್ತಾ ಬಂದಿದ್ದೇನೆ.

ಟಿಕೇಟ್ ಸಿಗುವ ಭರವಸೆ ನನಗಿತ್ತು. ಕಾಂಗ್ರೆಸ್‍ನ ಹೈ ಕಮಾಂಡ್‍ ಕೂಡ ನನಗೆ ಭರವಸೆ ನೀಡಿತ್ತಾದರೂ, ಕೊನೆಗಳಿಗೆಯಲ್ಲಿ ಟಿಕೇಟ್ ನನಗೆ ನೀಡದೆ ವ್ಯಾಪಾರಿಯೊಬ್ಬರಿಗೆ ಕೊಟ್ಟಿದೆ. ಇದರ ಪರಿಣಾಮ ಮುಂದಿನ ಮೇ 10ರಂದು ಚುನಾವಣೆಯಲ್ಲಿ ಮತದಾರರು ತೀರ್ಪು ನೀಡಲಿದ್ದಾರೆ ಎಂದು ಹೇಳಿದರು.

ನನಗೆ ಇಲ್ಲಿ ಜೆಡಿಎಸ್ ಅಭ್ಯರ್ಥಿ ಎದುರಾಳಿ, ಸ್ವಾಭಿಮಾನವನ್ನು ಇಲ್ಲಿನ ಮತದಾರರು ಗೆಲ್ಲಿಸುತ್ತಾರೆ, ಬದಲಾವಣೆಗಾಗಿ ಪುಟ್ಟು ಆಂಜಿನಪ್ಪನಿಗೆ ಮತ ಕೊಡುತ್ತಾರೆ ಎಂಬ ಅಚಲ ವಿಶ್ವಾಸ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆನೂರು ದೇವರಾಜ್, ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಮತಪ್ರಚಾರದಲ್ಲಿ ಭಾಗವಹಿಸಿದ್ದರು.


Independent Candidate Puttu Anjinappa Pledges Welfare and Counters Money Influence in Sidlaghatta Constituency

Sidlaghatta: In a fervent attempt to secure votes in the upcoming election, independent candidate Puttu Anjinappa embarked on a door-to-door campaign accompanied by his supporters. The campaign covered various areas within the Sidlaghatta town, including Mayura Circle, Shamanna Bavi Road, and Kamatigarapete.

Puttu Anjinappa, known for his emphasis on personal integrity and dedication to public welfare, sought the support of the voters. He firmly believed that the people of Sidlaghatta valued these qualities and would not be swayed by monetary temptations.

As Puttu Anjinappa visited households, he was greeted with warm welcomes, adorned with garlands, and offered aarti, a traditional Hindu ritual. Grateful for the reception, he expressed his gratitude and addressed the gathering.

During his speech, Puttu Anjinappa mentioned his affiliation with the Congress party and highlighted his eight years of service to the people. He shared his disappointment at not receiving the party ticket, despite assurances from the Congress High Command. Instead, the ticket was granted to a trader, a decision that he believed would be reflected in the voters’ verdict on May 10.

Remaining resolute, Puttu Anjinappa expressed his unwavering faith in the JDS candidate, who he believed would prioritize the self-respect of the voters and ultimately sway their support towards him, aiming for a much-needed change.

The election campaign received notable participation from various leaders, including Anur Devaraj and Vishwanath, further bolstering Puttu Anjinappa’s campaign.

With the May 10 election fast approaching, the people of Sidlaghatta constituency find themselves at a critical juncture, contemplating their choices and the vision each candidate presents for their future.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version