Home News ಮಳ್ಳೂರಿನ ಶ್ರೀ ನಾಗಲಮುದ್ದಮ್ಮದೇವಿಗೆ ಕ್ಷೀರಾಭಿಷೇಕ

ಮಳ್ಳೂರಿನ ಶ್ರೀ ನಾಗಲಮುದ್ದಮ್ಮದೇವಿಗೆ ಕ್ಷೀರಾಭಿಷೇಕ

0
Sidlaghatta Mallur Sri Nagalamuddamma Temple

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಶ್ರೀ ನಾಗಲಮುದ್ದಮ್ಮದೇವಿ ದೇವಾಲಯದಲ್ಲಿ ಸೋಮವಾರ ಕ್ಷೀರಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಬೆಳಗ್ಗೆಯಿಂದ ಪ್ರಾರಂಭವಾದ ಪೂಜಾ ಕಾರ್ಯಕ್ರಮದಲ್ಲಿ ಗಣಪತಿ ಪೂಜೆ, ಗಂಗೆ ಪೂಜೆ, ಪುಣ್ಯಾಹ, ನವಗ್ರಹ ಪೂಜೆ, ವಾಸ್ತು ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಶ್ರೀಗಣ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ಅಷ್ಟದಿಕ್ಪಾಲಕರ ಹೋಮ, ಮೃತ್ಯುಂಜಯ ಹೋಮ, ಶ್ರೀ ನಾಗಲಮುದ್ದಮ್ಮದೇವಿಗೆ ಕ್ಷೀರಾಭಿಷೇಕ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.

 ಅರ್ಚಕ ಕಣಜೇನಹಳ್ಳಿ ಸುರೇಶ್ ಆಚಾರ್ಯ ಮತ್ತು ತಂಡ, ಶ್ರೀ ನಾಗಲಮುದ್ದಮ್ಮದೇವಿ ಕುಲಬಾಂದವರು, ಮಳ್ಳುರು ಹಾಗೂ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version