ಆಹಾರ ಸಚಿವ ಉಮೇಶ್ ಕತ್ತಿ ಅವರ ಭಾವಚಿತ್ರವನ್ನು ಹಿಡಿದು ಹಾಗೂ ಧಿಕ್ಕಾರಗಳನ್ನು ಬರೆದಿರುವ ಪೋಸ್ಟರ್ ಗಳನ್ನು ಹಿಡಿದು ಯುವಕರು ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಎನ್ ಎಸ್ ಯು ಐ ಸಂಘಟನೆಯ ನೇತೃತ್ವದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮೌನವಾಗಿ ಪ್ರತಿಭಟಿಸಿದರು.
ಇಡೀ ದೇಶದಲ್ಲಿ ಕೊರೊನಾದಿಂದಾಗಿ ಜನ ಸಾಯುತ್ತಿರುವ ಇಂಥ ಪರಿಸ್ಥಿತಿಯಲ್ಲಿ ಈ ರಾಜ್ಯದಲ್ಲಿ ಪಡಿತರರಿಗೆ ನೀಡುತ್ತಿರುವಂಥ 5ಕೆಜಿ ಅಕ್ಕಿಯನ್ನು 2ಕೆಜಿ ಇಳಿಸಿ ಜನಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ. ದೂರವಾಣಿ ಮುಖಾಂತರ ಸಚಿವರ ಜತೆ ಮಾತನಾಡುತ್ತ ಇರುವಂತ ಸಂದರ್ಭದಲ್ಲಿ ರೈತನ ಜೊತೆ ಅವಹೇಳನವಾಗಿ ಮಾತನಾಡಿರುವುದು ಇಡೀ ದೇಶದ ರೈತರಿಗೆ ಮಾಡಿದ ಅವಮಾನವಾಗಿದೆ. ತಕ್ಷಣ ಆ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿ ಎನ್ ಎಸ್ ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಭಾಸ್ಕರ್, ಆನಂದ್, ಮುರಳಿ, ಕೇಶವ, ರಾಮ ಚಂದ್ರ, ದೇವರಾಜ್, ಪಾಪಣ್ಣ, ಮುನಿರಾಜು, ಪ್ರಮೋದ್ ಹಾಜರಿದ್ದರು