Home News ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಗತಿಕರಿಗೆ ಮಾಸಾಶನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಗತಿಕರಿಗೆ ಮಾಸಾಶನ

0
Dharmasthala sangha Monthly Pension for Poor

ಕೊರೊನಾ ಎರಡನೇ ಈ ಸಂದರ್ಭದಲ್ಲಿ ನಿರ್ಗತಿಕರಿಗೆ ಮಾಸಾಶನ ಕೊಡುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೆರವನ್ನು ನೀಡುತ್ತಿರುವುದಾಗಿ ಮೇಲ್ವಿಚಾರಕಿ ಅನಿತಾ ಸುರೇಶ್ ತಿಳಿಸಿದರು.

 ತಾಲ್ಲೂಕಿನ ಮೇಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿರ್ಗತಿಕರಿಗೆ ಮಾಸಾಶನ ನೀಡಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಸುಮಾರು 250 ಕುಟುಂಬದವರಿಗೆ ಮಾಸಾಸನ ನೀಡಲಾಗುತ್ತಿದೆ. ಲಾಕ್ ಡೌನ್ ಇರುವ ಕಾರಣ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಕೇಂದ್ರಗಳನ್ನು ಮುಚ್ಚಿದ್ದು, ಯೋಜನೆಯ ಕಾರ್ಯಕರ್ತರು ಮನೆಮನೆಗೆ ತೆರಳಿ ಮಾಸಾಶನ ವಿತರಣೆ ಮಾಡಿ ಬರುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಇದು ಬಹಳಷ್ಟು ನೆರವಾಗಲಿದೆ.

ತಾಲ್ಲೂಕಿನಲ್ಲಿ 2 ವಾಹನಗಳನ್ನು ಬಿಟ್ಟಿದ್ದು, ಅವುಗಳ ಮೂಲಕ ಕೊರೊನೊ ರೋಗಿಗಳಿಗೆ ಉಚಿತ ಸೇವೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮವು  ಸ್ಥಳೀಯ ಮೇಲ್ವಿಚಾರಕರು, ಊರಿನ ಗಣ್ಯರು ಒಕ್ಕೂಟದ ಅಧ್ಯಕ್ಷರು, ಸೇವಾ ಪ್ರತಿನಿಧಿಗಳ ಸಹಕಾರದಲ್ಲಿ ನಡೆದಿದೆ ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version