Home News ಸಮರ್ಪಕ ವಿದ್ಯುತ್ ಪೂರೈಸಿ ರೈತರು, ರೀಲರ್ ಗಳನ್ನು ಉಳಿಸಿ

ಸಮರ್ಪಕ ವಿದ್ಯುತ್ ಪೂರೈಸಿ ರೈತರು, ರೀಲರ್ ಗಳನ್ನು ಉಳಿಸಿ

0

Sidlaghatta : ಶಿಡ್ಲಘಟ್ಟದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಷ್ಟೆ ಸಂಖ್ಯೆಯಲ್ಲಿ ರೇಷ್ಮೆ ಕೃಷಿ ಮತ್ತು ರೇಷ್ಮೆ ಉದ್ದಿಮೆಯಲ್ಲೂ ಸಾವಿರಾರು ಕುಟುಂಬಗಳು ತೊಡಗಿಸಿಕೊಂಡಿವೆ. ವಿದ್ಯುತ್‌ನ ಕಣ್ಣಾ ಮುಚ್ಚಾಲೆ ಆಟದಿಂದ ಒಂದು ಕಡೆ ರೈತರು ಇನ್ನೊಂದು ಕಡೆ ರೀಲರುಗಳು, ರೇಷ್ಮೆ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ದೂರಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸರ್ಕಾರವು ವಿದ್ಯುತ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ವಿದ್ಯುತ್‌ನ ಕಣ್ಣಾ ಮುಚ್ಚಾಲೆ ಆಟದಿಂದಾಗಿ ಒಂದು ಕಡೆ ರೈತರು, ಇನ್ನೊಂದು ಕಡೆ ರೀಲರುಗಳು, ಕೂಲಿ ಕಾರ್ಮಿಕರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.

ನೀಡುತ್ತಿರುವ ವಿದ್ಯುತ್ತನ್ನು ನಿಯಮಿತವಾಗಿ ನೀಡುತ್ತಿಲ್ಲ. ವಿದ್ಯುತ್ ಆಗಾಗ್ಗೆ ಹೋಗಿ ಬರುವುದರಿಂದ ರೈತರು ಹೆಂಡತಿ ಮಕ್ಕಳು ಮನೆ ಮಠ ಬಿಟ್ಟು ಪಂಪ್‌ಸೆಟ್ ಶೆಡ್ ಬಳಿ ಮಲಗಿಕೊಳ್ಳುವಂತಾಗಿದೆ. ಇಷ್ಟಾದರೂ ಬೆಳೆಗಳು ಒಣಗುತ್ತಿವೆ ಎಂದರು.

ಇನ್ನು ಕರೆಂಟ್ ಇದ್ದಕ್ಕಿದ್ದಂತೆ ಹೋಗುವುದರಿಂದ ರೇಷ್ಮೆ ನೂಲು ತುಂಡಾಗಿ ಗುಣಮಟ್ಟದ ರೇಷ್ಮೆ ನೂಲು ತೆಗೆಯಲು ಆಗುತ್ತಿಲ್ಲ. ಇದರಿಂದ ರೀಲರುಗಳು ಕಡಿಮೆ ಬೆಲೆಗೆ ರೇಷ್ಮೆ ನೂಲನ್ನು ಮಾರಾಟ ಮಾಡಿ ನಷ್ಟಕ್ಕೀಡಾಗುತ್ತಿದ್ದಾರೆ.

ವಿದ್ಯುತ್ ಸಮಸ್ಯೆಯಿಂದ ಅನೇಕ ನೂಲು ಬಿಚ್ಚಾಣಿಕೆ ಘಟಕಗಳು ತಾತ್ಕಾಲಿಕವಾಗಿ ಕೆಲಸವನ್ನು ಸ್ಥಗಿತಗೊಳಿಸಿದ್ದು ನೂಲು ಬಿಚ್ಚಾಣಿಕೆದಾರ ಕೆಲಸಗಾರರು ಕೆಲಸವಿಲ್ಲದೆ ಕುಟುಂಬ ನಿರ್ವಹಣೆ ಮಾಡಲು ಹೆಣಗಾಡುವಂತಾಗಿದೆ ಎಂದು ಆಪಾದಿಸಿದರು.

ಅಕ್ಟೋಬರ್‌ನಲ್ಲೆ ಪರಿಸ್ಥಿತಿ ಈ ರೀತಿ ಆದರೆ ಮುಂದಿನ ಮಾರ್ಚ್ ಏಪ್ರಿಲ್‌ನಲ್ಲಿ ಪರಿಸ್ಥಿತಿಯನ್ನು ಈ ಸರ್ಕಾರವು ನಿಭಾಯಿಸಲು ಸಾಧ್ಯವೇ ಇಲ್ಲ, ಗ್ಯಾರಂಟಿಗಳ್ನು ಸಮರ್ಪಕವಾಗಿ ಜಾರಿ ಮಾಡಲು ಹೆಣಗಾಡುತ್ತಿರುವ ಸರ್ಕಾರವು ವಿದ್ಯುತ್‌ನ್ನು ಸಮರ್ಪಕವಾಗಿ ಪೂರೈಸುವ ಖಾತ್ರಿಯೆ ಇಲ್ಲ.

ಆದ್ದರಿಂದ ಈಗಲೆ ಸರ್ಕಾರ ಎಚ್ಚೆತ್ತು ವಿದ್ಯುತ್ ಸಮಸ್ಯೆ ಎದುರಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ರೈತರು, ರೀಲರುಗಳು, ಕೂಲಿ ಕಾರ್ಮಿಕರನ್ನು ಉಳಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಬಿಜೆಪಿಯಿಂದ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version