Home News ಗೊರಮಡಗುವಿನಲ್ಲಿ ಚುಟುಕು ಕ್ರಿಕೆಟ್ ಟೂರ್ನಮೆಂಟ್

ಗೊರಮಡಗುವಿನಲ್ಲಿ ಚುಟುಕು ಕ್ರಿಕೆಟ್ ಟೂರ್ನಮೆಂಟ್

0
Sidaghatta Goramadugu Cricket Tournament

Goramadugu, Sidlaghatta : ಡೆಯನ್ನು ಕ್ರೀಡಾ ಸ್ಫೂರ್ತಿಯೊಂದಿಗೆ ಆಡಬೇಕು. ಕೇವಲ ಗೆಲುವಿಗಾಗಿ ಆಡುವುದಲ್ಲ, ಬದಲಾಗಿ ತಂಡದ ಮನೋಭಾವ, ಪರಸ್ಪರ ಗೌರವ, ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಗುಣಗಳು, ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸತೀಶ್ ಅವರು ಕರೆ ನೀಡಿದರು. ತಾಲ್ಲೂಕಿನ ಗೊರಮಡಗು ಗ್ರಾಮದಲ್ಲಿ ಯುವ ಮುಖಂಡ ಗೋಪಾಲ ಗೌಡ ಹಾಗೂ ಪತ್ರಕರ್ತ ಮೈತ್ರಿ ಲೋಕೇಶ್ ಅವರ ಸಂಯುಕ್ತ ಆಯೋಜನೆಯಲ್ಲಿ ನಡೆದ ಚುಟುಕು ಕ್ರಿಕೆಟ್ ಟೂರ್ನಮೆಂಟ್ (Cricket Tournament) ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯು ಕಲೆ ಮತ್ತು ಜೀವನದ ಮೌಲ್ಯಗಳನ್ನು ಬೆಳೆಸುತ್ತದೆ ಮತ್ತು ಯುವಜನತೆಯಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಗುರಿ ಇರಬೇಕು. ಏನಾದರೂ ಸಾಧಿಸಬೇಕೆಂಬ ಛಲ ಯುವಕರಲ್ಲಿ ಇರಬೇಕು. ಜೂಜು ಆಡುವುದು, ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದು ತಪ್ಪು ಎಂದು ಎಚ್ಚರಿಕೆ ನೀಡಿದ ಸಬ್ ಇನ್ಸ್‌ಪೆಕ್ಟರ್ ಸತೀಶ್ ಅವರು, ಗ್ರಾಮದಲ್ಲಿ ಯಾರೂ ಸಹ ಮದ್ಯವನ್ನು ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಸಂಪೂರ್ಣ ಟೂರ್ನಮೆಂಟ್‌ಗೆ ಅಗತ್ಯ ಪ್ರೋತ್ಸಾಹವನ್ನು ಆಯೋಜಕರಾದ ಗೋಪಾಲ ಗೌಡ ಮತ್ತು ಮೈತ್ರಿ ಲೋಕೇಶ್ ಒದಗಿಸಿದ್ದರು. ಟೂರ್ನಮೆಂಟ್‌ನಲ್ಲಿ ಮೊದಲ ಬಹುಮಾನ ₹10,000 ಮತ್ತು ಎರಡನೇ ಬಹುಮಾನ ₹5,000 ನಿಗದಿಪಡಿಸಲಾಗಿತ್ತು.

ಟೂರ್ನಮೆಂಟ್ ಫಲಿತಾಂಶದಲ್ಲಿ, ಆರ್ಮಿ 11 ತಂಡವು ಪ್ರಥಮ ಬಹುಮಾನ, ಒಜಿ ತಂಡವು ದ್ವಿತೀಯ ಬಹುಮಾನ, ಯಂಗ್ ಸ್ಟಾರ್ಸ್ ತಂಡವು ಮೂರನೇ ಬಹುಮಾನ ಹಾಗೂ ಕಿಂಗ್ಸ್ ತಂಡವು ನಾಲ್ಕನೇ ಬಹುಮಾನ ಪಡೆದುಕೊಂಡವು. ಈ ಕಾರ್ಯಕ್ರಮದಲ್ಲಿ ಮುಖಂಡರಾದ ಮುನಿ ನಾರಾಯಣಸ್ವಾಮಿ, ಡಿಶ್ ಮಂಜುನಾಥ್, ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರ ಬಿ.ಇ. ವಿಶ್ವನಾಥ್, ವಕೀಲ ಲಕ್ಷ್ಮೀನರಸಿಂಹ, ಬಿಲ್ ಕಲೆಕ್ಟರ್ ಸುಬ್ರಮಣಿ, ಶಿವರಾಜ್, ವೆಂಕಟೇಶ್, ಮುನಿಕೃಷ್ಣ, ಮುನಿಯಪ್ಪ, ಜೆಸಿಬಿ ಚೇತನ್, ವಿಜಯ್ ಕುಮಾರ್, ಟ್ರ್ಯಾಕ್ಟರ್ ಮಧು, ಅಜಿತ್, ಗೌತಮ್, ಚೇತನ್, ಗಂಗರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version