Home News ಅಯ್ಯಪ್ಪಸ್ವಾಮಿ ದೀಪಾರಾಧನೆ

ಅಯ್ಯಪ್ಪಸ್ವಾಮಿ ದೀಪಾರಾಧನೆ

0
Sidlaghatta Ayyappa Swamy Deeparadhane

ಶಿಡ್ಲಘಟ್ಟ ನಗರದ ಅಶೋಕ ರಸ್ತೆಯ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ಸನ್ನಿಧಿಯಲ್ಲಿರುವ ಅಯ್ಯಪ್ಪಸ್ವಾಮಿಗೆ ಅಯ್ಯಪ್ಪಸ್ವಾಮಿ ಭಕ್ತಮಂಡಳಿಯಿಂದ ದೀಪಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಬೆಳ್ಳಗ್ಗೆಯಿಂದಲೇ ಕಾಶಿವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಇರುವ ಅಯ್ಯಪ್ಪ ಸ್ವಾಮಿಗೆ  ಹೂವಿನ ಅಲಂಕಾರ, ದೀಪ ಅಲಂಕಾರ ಭಜನೆ ಕಾರ್ಯಕ್ರಮಗಳು ನಡೆಯಿತು. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

 ಶಿಡ್ಲಘಟ್ಟ ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಇರಿಸಿದ ಶ್ರೀ ಅಯ್ಯಪ್ಪಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ನಡೆಯಿತು ಮೆರವಣಿಗೆ ನಡೆಸಲಾಯಿತು. ಅಯ್ಯಪ್ಪ ಭಕ್ತರು ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಪೂಜೆ ಸಲ್ಲಿಸಿದರು

 ಹಲವಾರು ಮಂದಿ ಭಕ್ತಾದಿಗಳು ಅಕ್ಕಿಯನ್ನಿಟ್ಟಿರುವ ಆರತಿ ತಟ್ಟೆಯಲ್ಲಿ ದೀಪ ಬೆಳಗಿ ದೇವರಿಗೆ ಪೂಜೆ ಸಲ್ಲಿಸಿದರು, ಮೆರವಣಿಗೆಯಲ್ಲೂ ಹೆಜ್ಜೆ ಹಾಕಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version