Home News ಜಿಲ್ಲಾ BJP, ಟ್ರೈಲೈಫ್ ಆಸ್ಪತ್ರೆಯಿಂದ ಯುಗಾದಿಗೆ ದಿನಸಿ ಕಿಟ್ ವಿತರಣೆ

ಜಿಲ್ಲಾ BJP, ಟ್ರೈಲೈಫ್ ಆಸ್ಪತ್ರೆಯಿಂದ ಯುಗಾದಿಗೆ ದಿನಸಿ ಕಿಟ್ ವಿತರಣೆ

0
Sidlaghatta BJP Ugadi Kit Distribution

Sidlaghatta : ಎತ್ತಿನ ಹೊಳೆ ನೀರು ತರಲೆಂದು ಶಾಶ್ವತ ನೀರಾವರಿ ಹೋರಾಟ ಆರಂಭವಾಗಿ 15 ವರ್ಷಗಳೆ ಕಳೆದರೂ ಇನ್ನೂ ಕೂಡ ನಮ್ಮ ಭಾಗಕ್ಕೆ ಶಾಶ್ವತ ನೀರಾವರಿ ಹರಿಯಲಿಲ್ಲ. ಹರಿಯುತ್ತಿರುವ ನೀರು ಕೂಡ ವಿಷಕಾರಿ ಆಗಿರುವುದು ಆತಂಕಕಾರಿ ಹಾಗೂ ನಮ್ಮ ದುರಂತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅತಂಕ ವ್ಯಕ್ತಪಡಿಸಿದರು.

ನಗರದ ಬಿಜೆಪಿ ಸೇವಾ ಸೌಧ ಕಚೇರಿ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ, ಟ್ರೈಲೈಫ್ ಆಸ್ಪತ್ರೆಯಿಂದ ಯುಗಾದಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ಸೀರೆ ಅರಿಶಿಣ ಕುಂಕುಮ ಹಾಗೂ ದಿನಸಿ ಕಿಟ್ ವಿತರಿಸಿ ಮಾತನಾಡಿದರು.

ಇದೀಗ ನಮ್ಮ ಭಾಗದಲ್ಲಿ ಹರಿಯುತ್ತಿರುವ ಎಚ್‌.ಎನ್ ವ್ಯಾಲಿ ಮತ್ತು ಕೆಸಿ ವ್ಯಾಲಿ ನೀರು ಕಲುಷಿತಗೊಂಡಿದ್ದು ವಿಷಕಾರಿಯಾಗಿದೆ. ಇದು ಅಂತರ್ಜಲಕ್ಕೆ ಸೇರುತ್ತಿದೆ. ಇಂದಲ್ಲ ಮುಂದೊಂದು ದಿನ ನಮಗೆ ಇದರಿಂದ ತೊಂದರೆ ಕಟ್ಟಿಟ್ಟ ಬುತ್ತಿ ಎಂದರು.

ಈ ಬಗ್ಗೆ ವಿಧಾನಸೌಧ, ಸಂಸತ್‌ ನಲ್ಲಿ ನಮ್ಮ ಎನ್‌.ಡಿ.ಎ ಮೈತ್ರಿ ಮುಖಂಡರು ಧ್ವನಿ ಎತ್ತುತ್ತಿದ್ದಾರೆ. ಆದರೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದು ಇಡೀ ಬಯಲು ಸೀಮೆ ಭಾಗದ ರೈತರ, ಕೃಷಿಕರ ಭವಿಷ್ಯ, ಬದುಕಿನ ಪ್ರಶ್ನೆಯಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಈ ಬಗ್ಗೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಬಯಲು ಸೀಮೆ ಭಾಗದ ರೈತರು ರಾಜ್ಯ ಸರ್ಕಾರದ ವಿರುದ್ದ ಬೀದಿಗೆ ಇಳಿಯುವುದರಲ್ಲಿ ಅನುಮಾನವಿಲ್ಲ ಎಂದರು.

ಟ್ರೈಲೈಫ್ ಆಸ್ಪತ್ರೆಯ ಡಾ.ಶಫೀಕ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ ಸೇರಿದಂತೆ ಬಿಜೆಪಿಯ ಎಲ್ಲ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

Exit mobile version