
Sidlaghatta : ಶಿಡ್ಲಘಟ್ಟ ನಗರ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಗೆ ನಿಶ್ಚಿತಾರ್ಥ ನಡೆದಿದ್ದು, ಮಕ್ಕಳ ಸಹಾಯವಾಣಿಯಿಂದ ಮಗುವನ್ನು ರಕ್ಷಿಸಲಾಯಿತು. ಆನಂತರ ಮಗುವನ್ನು ಮತ್ತೆ ಪೋಷಕರೊಂದಿಗೆ ಬಿಡುವಾಗ ಮತ್ತೆ ಮದುವೆಯಾಗುವ ಸಂಭವವಿರುವುದರಿಂದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಮಗುವಿಗೆ 18 ವರ್ಷ ತುಂಬುವರೆಗೂ ಬಾಲ್ಯ ವಿವಾಹ ಮಾಡದಂತೆ ತಡೆಯಜ್ಞೆಯನ್ನು ಪಡೆದಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ ನೌತಾಜ್ , ಮಕ್ಕಳ ಸಹಾಯವಾಣಿ ಸಮಾಲೋಚಕಿ ನಂದಿನಿ, ಸಿ.ಆರ್.ಪಿ ಮುನಿ ನಾರಾಯಣಸ್ವಾಮಿ, ನಗರ ಸಭೆ ಸಿಬ್ಬಂದಿ ಶ್ರೀನಿವಾಸ್, ಪೊಲೀಸ್ ಸಿಬ್ಬಂದಿ ರಮೇಶ್ ಹಾಜರಿದ್ದರು.