Home News ಶಿಡ್ಲಘಟ್ಟದಲ್ಲಿ ISRO “Space on Wheels”

ಶಿಡ್ಲಘಟ್ಟದಲ್ಲಿ ISRO “Space on Wheels”

0
Sidlaghatta Isro Space on Wheels

Sidlaghatta : ನಗರದ ಡಾಲ್ಪಿನ್ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾಲ್ಪಿನ್ ವಿದ್ಯಾ ಸಂಸ್ಥೆ (Dolphin Public School) ಸಹಯೋಗದಲ್ಲಿ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ISRO) “Space on Wheels” ವೋಲ್ವೋ ಬಸ್ ಅನ್ನು ವಿದ್ಯಾರ್ಥಿಗಳ ವೀಕ್ಷಣೆಗೆ ಚಾಲನೆ ನೀಡಿ ISRO ಸಂಸ್ಥೆಯ ವಿಜ್ಞಾನಿ ಎಚ್.ಎಲ್.ಶ್ರೀನಿವಾಸ್ ಅವರು ಮಾತನಾಡಿದರು.

1969 ರಿಂದ ಇಲ್ಲಿಯವರೆಗೂ ISRO ಸಂಸ್ಥೆ ಮಾಡಿರುವ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಮತ್ತು ಅವರಲ್ಲಿ ವೈಜ್ಞಾನಿಕ ಮನೋಬೂಮಿಕೆಯನ್ನು ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಇಸ್ರೋ ಸಂಸ್ಥೆ ಬಸ್ ನಲ್ಲಿ ಎಲ್ಲಾ ಪ್ರತಿಕೃತಿಗಳು, ವೀಡಿಯೋ ಹಾಗೂ ಚಿತ್ರರೂಪಿ ಪ್ರದರ್ಶನದ ಮೂಲಕ ಎಲ್ಲೆಡೆ ಸಂಚರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

1969 ರಲ್ಲಿ ಸ್ಥಾಪನೆಯಾದ ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ, ಅಲ್ಲಿಂದ ಇಲ್ಲಿಯವರೆಗೆ ತಾನು ಮಾಡಿದ ಸಾಧನೆಗಳನ್ನು ಭಾರತದಲ್ಲಿ ವಿಧ್ಯಾರ್ಥಿಗಳು, ಸಾರ್ವಜನಿಕರಿಗೆ ತಿಳಿಯಪಡಿಸಬೇಕು ಮತ್ತು ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಹೆಚ್ಚಿನ ರೀತಿಯಲ್ಲಿ ಅರಿವನ್ನು ಮೂಡಿಸಬೇಕು ಎಂಬ ಧ್ಯೇಯವನ್ನು ಹೊಂದಿದೆ. ಮಂಗಳಯಾನ, ಚಂದ್ರಯಾನ, ರಾಕೆಟ್ ತಂತ್ರ ಜ್ಞಾನ, ಉಪಗ್ರಹ, ಉಪಗ್ರಹ ಉಡಾವಣೆ ಇನ್ನೂ ಮುಂತಾದ ವಿಷಯಗಳ ಕುರಿತು ಮಾಡಲ್ ಗಳನ್ನು ತಯಾರಿಸಿ ಅದರ ಬಗ್ಗೆ ಮಾಹಿತಿಯನ್ನು ಒದಗಿಸಿ “ಸ್ಪೇಸ್ ಆನ್ ವೀಲ್ಸ್” ಬಸ್ ನಲ್ಲಿ ಅಳವಡಿಸಲಾಗಿದೆ.”ಸ್ಪೇಸ್ ಆನ್‌ ವೀಲ್ಸ್” ನಲ್ಲಿರುವ ‌ಪ್ರದರ್ಶನ ಮತ್ತು ಮಾಹಿತಿ ವಿಧ್ಯಾರ್ಥಿಗಳಿಗೆ ಹೆಚ್ಚಿನ ಅರಿವನ್ನು ‌ಮೂಡಿಸಿ ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ಬಗ್ಗೆ ಕುತೂಹಲ ಉಂಟು ಮಾಡುತ್ತದೆ ಎಂದರು.

ವಿದ್ಯಾರ್ಥಿಗಳು ಹಾಗೂ ಆಸಕ್ತರು ಇಸ್ರೋ ಸಂಸ್ಥೆಗೆ ಬಂದು ನೋಡಲು ಮಾಹಿತಿ ಪಡೆದುಕೊಳ್ಳಲು ಕಷ್ಟವಾಗುತ್ತದೆ. ಆರ್ಯಭಟ ಉಪಗ್ರಹದಿಂದ ಪ್ರಾರಂಭಗೊಂಡು ಚಂದ್ರಯಾನ, ಮಂಗಳಯಾನದವರೆಗೂ ಎಲ್ಲಾ ವಿವರಗಳು ಮಾಹಿತಿಯನ್ನೊಳಗೊಂಡ ಬಸ್ ಗಳನ್ನು ರೂಪಿಸಿದ್ದು, ವಿದ್ಯಾರ್ಥಿಗಳ ಬಳಿಗೇ ಬಂದು ತೋರಿಸಿ ವಿವರಿಸಲಾಗುತ್ತಿದೆ. ಒಟ್ಟು ನಾಲ್ಕು ಬಸ್ ಗಳನ್ನು ರೂಪಿಸಿದ್ದು, ಕರ್ನಾಟಕ, ಆಂಧ್ರ, ಗುಜರಾತ್ ಮತ್ತು ಕೇರಳ ರಾಜ್ಯಗಳಲ್ಲಿ ವಿದ್ಯಾರ್ಥಿಗಳನ್ನು ತಲುಪಲಾಗುತ್ತಿದೆ, ಅದರಲ್ಲೂ ಮುಖ್ಯವಾಗಿ ಸರ್ಕಾರಿ ಶಾಲೆಯ ಮಕ್ಕಳನ್ನು ತಲುಪುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಇಸ್ರೋ ಸಂಸ್ಥೆಯ ಸಾಧನೆಗಳನ್ನು ಅನಾವರಣಗೊಳಿಸುವ ವಿದ್ಯಾರ್ಥಿಗಳನ್ನು ನಮ್ಮ ದೇಶದ ವೈಜ್ಞಾನಿಕ ಸಾಧನೆ ತೋರಿಸುವ, ಪ್ರೇರೇಪಿಸುವ “ಸ್ಪೇಸ್ ಆನ್ ವೀಲ್ಸ್” ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಲ್ಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರೌಢಶಾಲೆಯ ಹತ್ತನೆಯ ತರಗತಿಯ‌ ವಿಧ್ಯಾರ್ಥಿಗಳು, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪದವಿ ಕಾಲೇಜಿ‌ನ ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯೋಪಾಧ್ಯಾಯರು, ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಒಟ್ಟಾರೆ 5 ಸಾವಿರ ವಿದ್ಯಾರ್ಥಿಗಳಿಂದ ವೀಕ್ಷಣೆಯಾಗಿದೆ ಎಂದು ಹೇಳಿದರು.

ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಇಸ್ರೋ ವಿಜ್ಞಾನಿ ಶ್ರೀನಿವಾಸ್ ಅವರಿಂದ ನಡೆದ ಇಸ್ರೋ ಸಾಧನೆಗಳ ವಿವರಗಳನ್ನೊಳಗೊಂಡ ಪಿಪಿಟಿ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ 350 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗಿಯಾಗಿದ್ದರು. ಸಿ.ಬಿ.ಎಸ್.ಸಿ ವಿದ್ಯಾರ್ಥಿಗಳಿಂದ ವೈಜ್ಞಾನಿಕ ಪ್ರತಿಕೃತಿಗಳ ಪ್ರದರ್ಶನ ನಡೆಯಿತು. ವಿಜ್ಞಾನಿ ಜೊತೆಯಲ್ಲಿ ಸಂವಾದ ಮಾಡಿದ ವಿಧ್ಯಾರ್ಥಿಗಳಿಗೆ ಹಾಗೂ ಉತ್ತಮ ವೈಜ್ಞಾನಿಕ ಪ್ರತಿಕೃತಿ ಮಾಡಿರುವ ವಿದ್ಯಾರ್ಥಿಗಳಿಗೆ ಕ.ಸಾ.ಪ ವತಿಯಿಂದ ಪ್ರಮಾಣಪತ್ರ ನೀಡಲಾಯಿತು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೋಡಿರಂಗಪ್ಪ, ಗೌರವ ಕಾರ್ಯದರ್ಶಿ ಅಮೃತಕುಮಾರ್, ಡಾಲ್ಫಿನ್ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಕೆ.ರಮೇಶ್ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version