
Sidlaghatta : ಶಿಡ್ಲಘಟ್ಟ: ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಎ.ಶಶಿಕುಮಾರ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಚುನಾವಣೆಯಲ್ಲಿ ಶಶಿಕುಮಾರ್ ಅವರು ತಮ್ಮ ಪ್ರತಿಸ್ಪರ್ಧಿಗಿಂತ ಹೆಚ್ಚಿನ ಮತಗಳನ್ನು ಪಡೆದು ವಿಜಯ ಸಾಧಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾಧಿಕಾರಿ ಸೊ.ಸು.ನಾಗೇಂದ್ರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ನವಮೋಹನ್ ಮತ್ತು ದೇವರಾಜ್ ಅವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ಜರುಗಿತು. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಮತದಾನದಲ್ಲಿ ಎ.ಶಶಿಕುಮಾರ್ 10 ಮತಗಳನ್ನು ಪಡೆದರೆ, ಎನ್.ಇ.ಜಗದೀಶ್ ಬಾಬು 7 ಮತಗಳನ್ನು ಪಡೆದರು. ಕೇವಲ ಮೂರು ಮತಗಳ ಅಂತರದಿಂದ ಶಶಿಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾದರು.
ನೂತನ ಪದಾಧಿಕಾರಿಗಳ ಪಟ್ಟಿ: ಅಧ್ಯಕ್ಷರ ಆಯ್ಕೆಯ ನಂತರ ಉಳಿದ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
- ಉಪಾಧ್ಯಕ್ಷರು: ಎನ್.ಇ.ಜಗದೀಶ್ ಬಾಬು
- ಪ್ರಧಾನ ಕಾರ್ಯದರ್ಶಿ: ಎಸ್.ಮಂಜುನಾಥ್
- ಕಾರ್ಯದರ್ಶಿ: ಬಿ.ವಿ.ಲೋಕೇಶ್
- ಖಜಾಂಚಿ: ವೆಂಕಟೇಶ್
ಕಾರ್ಯಕಾರಿ ಸಮಿತಿ ಸದಸ್ಯರು: ಸಿ.ಇ.ಕರಗಪ್ಪ, ಇ.ನರಸಿಂಹಗೌಡ, ಎನ್.ನಾರಾಯಣಸ್ವಾಮಿ, ಎನ್.ಮಹೇಶ್, ಎನ್.ವಿ.ಶಿವಕುಮಾರ್ ಹಾಗೂ ಆರ್.ರಾಜೇಶ್ ಅವರು ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ಉಪಾಧ್ಯಕ್ಷ ಮುಬಶಿರ್ ಅಹಮ್ಮದ್, ಜಿಲ್ಲಾ ಕಾರ್ಯದರ್ಶಿ ಡಿ.ಜಿ.ಮಲ್ಲಿಕಾರ್ಜುನ, ಕಾರ್ಯಕಾರಿ ಸಮಿತಿ ಸದಸ್ಯ ಕೆ.ವಿ.ಮುನೇಗೌಡ, ಛಾಯಾ ರಮೇಶ್, ಮಿಥುನ್ ಕುಮಾರ್ ಹಾಗೂ ತಮೀಮ್ ಪಾಷ ಹಾಜರಿದ್ದರು.