
Mallur, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಮೂರನೇ ವರ್ಷದ ರೇಣುಕ ಯಲ್ಲಮ್ಮ ಕರಗ ಮಹೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಗ್ರಾಮದಲ್ಲಿ ನೆಲೆಸಿರುವ ರೇಣುಕ ಯಲ್ಲಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ದೀಪಲಂಕಾರ ಮಾಡಲಾಗಿದ್ದು, ಗ್ರಾಮವನ್ನು ವಿದ್ಯುತ್ ದೀಪಲಂಕಾರಗಳಿಂದ ಸಿಂಗರಿಸಲಾಗಿತ್ತು. ಬೆಂಗಳೂರಿನ ವಿದ್ಯಾರಣ್ಯಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಪೂಜಾರಿ ಸಂತೋಷ್ ಅವರು ಕರಗವನ್ನು ಹೊತ್ತು ಇಡೀ ಗ್ರಾಮವೆಲ್ಲ ಸುತ್ತಿದರು. ಮನೆಗಳ ಮುಂದೆ ರಂಗೋಲಿಗಳನ್ನು ಹಾಕಿ ಕರಗ ಬಂದಾಗ ಪೂಜೆ ಸಲ್ಲಿಸಿದರು. ಬೆಂಗಳೂರು ತಮಟೆ ಕಲಾ ತಂಡದವರು ಹಾಜರಿದ್ದರು ಹಾಗೂ ಸಂಜೆ ಆರ್ಕೆಸ್ಟ್ರಾ ವ್ಯವಸ್ಥೆ ಮಾಡಲಾಗಿತ್ತು
ಕಲಾವಿದರಾದ ಡಿ.ಎಂ. ಶ್ರೀನಿವಾಸ್, ಮುನಿಮಾಸಪ್ಪ, ಸತೀಶ್ ಕುಮಾರ್. ಎಮ್. ಎಚ್. ಹಾಗೂ ಮಳ್ಳೂರು ಗ್ರಾಮಸ್ಥರ ಸಹಯೋಗದಿಂದ ಕಾರ್ಯಕ್ರಮವನ್ನು ನಡೆಯಿತು.