
Sidlaghatta : ಬೇಸಿಗೆ ಶಿಬಿರವು ಕೇವಲ ಕೆಲವು ದಿನಗಳ ಚಟುವಟಿಕೆಯಲ್ಲ, ಬದಲಿಗೆ ನಮ್ಮ ಮಕ್ಕಳ ಜೀವನದಲ್ಲಿ ಒಂದು ಮಹತ್ವದ ಅಧ್ಯಾಯವಾಗಿ ಬದಲಾಗಿದೆ ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಜೈ ಭಾರತ್ ಕರಾಟೆ ಅಂಡ್ ಮಾರ್ಷಲ್ ಆರ್ಟ್ ಅಸೋಸಿಯೇಷನ್ ವತಿಯಿಂದ 30 ದಿನಗಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಭಾಗಿಯಾಗಿದ್ದ 30 ಕ್ಕೂ ಹೆಚ್ಚು ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ನೀಡಿ ಅವರು ಮಾತನಾಡಿದರು.
ಈ ಶಿಬಿರದಲ್ಲಿ ಮಕ್ಕಳು ಕರಾಟೆಯ ತಾಕತ್ತು ಕಲಿತಿದ್ದೀರಿ – ಅದು ನಿಮ್ಮ ದೃಢತೆಯನ್ನು ಹೆಚ್ಚಿಸುತ್ತದೆ. ಸ್ಕೇಟಿಂಗ್‌ನಲ್ಲಿ ಸಮತೋಲನ ಕಲಿತಿದ್ದೀರಿ – ಜೀವನದಲ್ಲಿ ಸರಿಯಾಗಿ ನಿಲ್ಲುವುದನ್ನು ಕಲಿಸುತ್ತದೆ. ಸ್ವಿಮ್ಮಿಂಗ್‌ನಲ್ಲಿ ನೀರಿನೊಂದಿಗೆ ಹರಿಯುವುದು ಕಲಿತಿದ್ದೀರಿ, ಜಿಮ್ನಾಸ್ಟಿಕ್ಸ್‌ನಲ್ಲಿ ದೇಹದ ಬಾಗಿಸುವಿಕೆ ಕಲಿತಿದ್ದೀರಿ, ಯೋಗದಲ್ಲಿ ಶರೀರ-ಮನಸ್ಸು ಏಕಾಗ್ರತೆ ಕಲಿತಿದ್ದೀರಿ. ಇನ್ನು ಹಲವು ಕ್ರೀಡೆಗಳು –ನಿಮ್ಮನ್ನು ತಂಡದ ಆಟಗಾರರನ್ನಾಗಿ ಮಾಡಿವೆ. ಈ ಎಲ್ಲಾ ಕ್ರೀಡೆಗಳು ನಿಮಗೆ ಕೇವಲ ಆಟವಲ್ಲ, ಜೀವನದ ಪಾಠಗಳು. ಉತ್ಸಾಹದಿಂದ ಆರಂಭಿಸಿ, ತಪ್ಪುಗಳಿಂದ ಕಲಿತು, ಗೆಲುವಿನ ಸ್ವಾದ ಅನುಭವಿಸಿದ್ದೀರಿ. ನೀವು ಈಗ ಆತ್ಮವಿಶ್ವಾಸದಿಂದ ತುಂಬಿದ್ದೀರಿ, ಆರೋಗ್ಯಕ್ಕೆ ಸ್ನೇಹಿತರಾಗಿದ್ದೀರಿ ಎಂದು ಹೇಳಿದರು.
ಜೈ ಭಾರತ್ ಕರಾಟೆ ಅಂಡ್ ಮಾರ್ಷಲ್ ಆರ್ಟ್ ಅಸೋಸಿಯೇಷನ್ ವತಿಯಿಂದ 30 ದಿನಗಳ ಬೇಸಿಗೆ ಶಿಬಿರದಲ್ಲಿ ಶಿಬಿರದಲ್ಲಿ ಮಕ್ಕಳಿಗೆ ಕರಾಟೆ, ಸ್ಕೇಟಿಂಗ್, ಸ್ವಿಮ್ಮಿಂಗ್, ಜಿಮ್ನಾಸ್ಟಿಕ್, ಡ್ಯಾನ್ಸ್, ಯೋಗ ಹಾಗೂ ಇನ್ನು ಹಲವು ಕ್ರೀಡೆಗಳನ್ನು ಮಕ್ಕಳಿಗೆ ಕಲಿಸಲಾಯಿತು. ಈ ಶಿಬಿರದಲ್ಲಿ 30 ಹೆಚ್ಚು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು ಎಂದು ಹೇಳಿದರು.