Home News ತಾಲ್ಲೂಕಿನಾದ್ಯಂತ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಂದ ಶೋಕಾಚರಣೆ

ತಾಲ್ಲೂಕಿನಾದ್ಯಂತ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಂದ ಶೋಕಾಚರಣೆ

0
Sidlaghatta Puneeth Rajkumar Death Fans Mourn

ಶಿಡ್ಲಘಟ್ಟ ನಗರದ ಬಸ್ ಸ್ಟಾಂಡ್ ಹಾಗೂ ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಶೋಕಾಚರಣೆ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ತಾಲ್ಲೂಕಿನ ಚೀಮನಹಳ್ಳಿ, ಚೀಮಂಗಲ, ಮೇಲೂರು, ಅಬ್ಲೂಡು, ದಿಬ್ಬೂರಹಳ್ಳಿ ಗಳಲ್ಲಿ ಪುನೀತ್ ರಾಜ್‍ಕುಮಾರ್ ರವರ ಭಾವಚಿತ್ರವನ್ನು ಇಟ್ಟು ಶ್ರದ್ಧಾಂಜಲಿ ಸಲ್ಲಿಸಿದರು.

 ನಗರದ ಮಯೂರ ವೃತ್ತ, ಮಾರಿಯಮ್ಮ ವೃತ್ತ, ಡಾ ಶಿವಕುಮಾರ್ ಸ್ವಾಮಿ ವೃತ್ತಗಳಲ್ಲಿ ಹಾಗೂ ವೆಂಕಟೇಶ್ವರ ಚಿತ್ರಮಂದಿರ, ಮಯೂರ ಚಿತ್ರ ಮಂದಿರಗಳ ಮುಂಭಾಗದಲ್ಲಿ ಪುನೀತ್ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿ ಶೋಕ ವ್ಯಕ್ತಪಡಿಸಿದರು.

 ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್, ವಚನ ಸಾಹಿತ್ಯ ಪರಿಷತ್ತು ಹಾಗೂ ಕನ್ನಡಪರ ಸಂಘಟನೆಗಳು ದಿವಂಗತರ ಬಗ್ಗೆ ಸಂತಾಪ ವ್ಯಕ್ತಪಡಿಸಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version