Home News ರೇಷ್ಮೆ ಹುಳುಗಳಿಗೆ ತಗುಲುವ ರೋಗಗಳ ನಿಯಂತ್ರಣ ಕುರಿತು ಮಾಹಿತಿ

ರೇಷ್ಮೆ ಹುಳುಗಳಿಗೆ ತಗುಲುವ ರೋಗಗಳ ನಿಯಂತ್ರಣ ಕುರಿತು ಮಾಹಿತಿ

0
Sidlaghatta Silk worm Diseases and Protection Awareness

Anur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಮತ್ತು ಆನೂರು ಗ್ರಾಮಗಳಲ್ಲಿ ರೇಷ್ಮೆ ಇಲಾಖೆ ವತಿಯಿಂದ ಹಿಪ್ಪುನೇರಳೆ ಸೊಪ್ಪಿಗೆ ಮತ್ತು ರೇಷ್ಮೆ ಹುಳುಗಳಿಗೆ ತಗುಲುವ ರೋಗಗಳು ಹಾಗೂ ನಿಯಂತ್ರಣದ ಕುರಿತಾಗಿ ರೈತರ ತೋಟಗಳಲ್ಲಿಯೇ ಅರಿವು ಮೂಡಿಸಲಾಯಿತು.

ರೇಷ್ಮೆ ಇಲಾಖೆಯ ಉಪನಿರ್ದೇಶಕ ಬೋಜಣ್ಣ ಮಾತನಾಡಿ, ರೈತರು ತೋಟಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಳ್ಳಬೇಕು. ಹಿಪ್ಪುನೇರಳೆ ಸೊಪ್ಪನ್ನು ಬಾಧಿಸುವ ಬ್ರಾಡ್ ನುಸಿ ಹತೋಟಿಗೆ ಮೂರು ಗ್ರಾಂ ಗಂಧಕವನ್ನು ಪ್ರತಿ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸುವಂತೆ ತಿಳಿಸಿದರು.

ರೇಷ್ಮೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ ಮಾತನಾಡಿ, ಜೈವಿಕ ನಿಯಂತ್ರಣಕ್ಕೆ ರೈತರು ಆಸಕ್ತಿ ವಹಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ ತಿಮ್ಮಪ್ಪ, ರೇಷ್ಮೆ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಬೈವೋಲ್ಟೀನ್ ಬೆಳೆಗಾರ ನಾಗೇಶ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version