Home News ಶ್ರೀರಾಮ ಶೋಭಾಯಾತ್ರೆ

ಶ್ರೀರಾಮ ಶೋಭಾಯಾತ್ರೆ

0
Sidlaghatta Sri Rama Shobha Yatra

Sidlaghatta : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ, ಶ್ರೀರಾಮ ಸೇನೆ ವತಿಯಿಂದ ಗುರುವಾರ ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶೋಭಯಾತ್ರೆಗೆ (Sri Rama Shobha Yatra) ಚಾಲನೆ ನೀಡಲಾಯಿತು.

 ದಿಬ್ಬೂರಹಳ್ಳಿ – ಶಿಡ್ಲಘಟ್ಟ ಮುಖ್ಯ ರಸ್ತೆಯ‌ ಮಾರ್ಗವಾಗಿ ಬೃಹತ್ ಶ್ರೀರಾಮನ ಪ್ರತಿಮೆಯೊಂದಿಗೆ ಡೊಳ್ಳು ಕುಣಿತ, ವೀರಗಾಸೆ, ತಮಟೆ, ಹುಲಿ ವೇಷಭೂಷಣ ಕಲಾತಂಡಗಳಿಂದ ಅದ್ದೂರಿ ಮೆರವಣಿಗೆ ಮಾಡಲಾಯಿತು.

ಶ್ರೀರಾಮ ಶೋಭಯಾತ್ರೆಗೆ ವಿಶೇಷ ಪೊಲೀಸ್ ಭದ್ರತೆಯನ್ನ ಒದಗಿಲಾಗಿತ್ತು.‌ಪೊಲೀಸ್ ಇಲಾಖೆಯು ಮುಂಜಾಗ್ರತ ಕ್ರಮವಾಗಿ ವಿಶೇಷ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿತ್ತು.‌

 ಶೋಭಯಾತ್ರೆಗೆ ಪೂರ್ಣಾನಂದ ಶ್ರೀಗಳು ಚಾಲನೆ ನೀಡಿದರು. ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, “ಹಿಂದೂ ಸಮಾಜ, ಹಿಂದುತ್ವ, ಶ್ರೀರಾಮನ ಅಭಿಮಾನಿಗಳು, ರಾಷ್ಟ್ರದಲ್ಲಿ ಮಹಾತ್ಮಗಾಂಧಿಜೀ ಕಂಡಿದ್ದ ರಾಮರಾಜ್ಯದ ಕನಸವನ್ನು ನನಸು ಮಾಡುವುದೇ ಶೋಭಯಾತ್ರೆಗೆ ಮುಖ್ಯ ಉದ್ದೇಶ. ಹಿಂದುತ್ವವನ್ನ‌ ಉಳಿಸಿ ಬೆಳೆಸಬೇಕು. ಹಿಂದೂ ಸಮಾಜವನ್ನ ಬೆಳೆಸಬೇಕು” ಎಂದು‌ ಹೇಳಿದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version