Home News ದಿನಕ್ಕೆ 100 ಲೀಟರ್ ಹಾಲು ಪೂರೈಕೆ ಹೆಚ್ಚಳ: ₹2.77 ಲಕ್ಷ ಲಾಭ ಗಳಿಸಿದ ಸಂಘ

ದಿನಕ್ಕೆ 100 ಲೀಟರ್ ಹಾಲು ಪೂರೈಕೆ ಹೆಚ್ಚಳ: ₹2.77 ಲಕ್ಷ ಲಾಭ ಗಳಿಸಿದ ಸಂಘ

0
Tummanahalli Milk Cooperative Society AGM Sidlaghatta

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಬಿಎಂಸಿ ಕೇಂದ್ರದ ಆವರಣದಲ್ಲಿ 2025–26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಸೋಮವಾರ ನಡೆಯಿತು.

In English: Tummanahalli village’s Milk Producers Cooperative Society held its 2025-26 annual general meeting, approving the audit report, profit allocation and the 2026-27 budget unanimously. The society reported a net profit of ₹2,77,579.43 for the year, with daily milk supply growing by over 100 litres.

ಸಭೆಯಲ್ಲಿ 2025–26ನೇ ಸಾಲಿನ ಆಡಿಟ್ ವರದಿ ಹಾಗೂ ಲಾಭ ಹಂಚಿಕೆ ಕುರಿತು ಚರ್ಚಿಸಿ, 2026–27ನೇ ಸಾಲಿನ ಮುಂಗಡ ಪತ್ರಕ್ಕೆ (ಬಜೆಟ್) ಸರ್ವಾನುಮತದ ಒಪ್ಪಿಗೆ ನೀಡಲಾಯಿತು. ನೂತನ ಲೆಕ್ಕ ಪರಿಶೋಧಕರ ನೇಮಕ ಹಾಗೂ ಸಂಭಾವನೆ ನಿಗದಿ ಕುರಿತೂ ತೀರ್ಮಾನಿಸಲಾಯಿತು.

ಚಿಮುಲ್ ನಿರ್ದೇಶಕ ಹುಜಗೂರು ರಾಮಣ್ಣ ಮಾತನಾಡಿ, “ಆಡಳಿತ ಮಂಡಳಿ ಮತ್ತು ಕಾರ್ಯದರ್ಶಿಯವರ ಸುಸೂತ್ರ ನಿರ್ವಹಣೆಯಿಂದ ಸಂಘಕ್ಕೆ ಪ್ರತಿದಿನ 100 ಲೀಟರ್‌ಗೂ ಹೆಚ್ಚು ಹಾಲು ಪೂರೈಕೆ ಹೆಚ್ಚಾಗಿದೆ. ಸಂಘ ಪ್ರಗತಿಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ” ಎಂದರು.

ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, “ಸಹಕಾರ ಸಂಘಗಳಲ್ಲಿ ರಾಜಕೀಯ ಇರಬಾರದು. ಹಾಲು ಉತ್ಪಾದಕರಿಗೆ ಸೂಕ್ತ ಬೋನಸ್ ಹಾಗೂ ಉತ್ತಮ ಬೆಲೆ ನೀಡಬೇಕು” ಎಂದು ಹೇಳಿದರು.

ಶಿಡ್ಲಘಟ್ಟ ಶಿಬಿರದ ವಿಸ್ತರಣಾಧಿಕಾರಿ ಎನ್. ಸತ್ಯನಾರಾಯಣ ಅವರು ಸಂಘದ ಹಾಲು ವ್ಯಾಪಾರ, ಜಾನುವಾರುಗಳ ಫೀಡ್ ಮಾರಾಟ ಹಾಗೂ ಸ್ಥಳೀಯ ಹಾಲು ಮಾರಾಟದ ಲೆಕ್ಕಪತ್ರಗಳನ್ನು ಮಂಡಿಸಿದರು. ವೆಚ್ಚಗಳನ್ನು ಕಳೆದ ಬಳಿಕ ಸಂಘವು ₹2,77,579.43 ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಟಿ.ಎಚ್. ನಾರಾಯಣಸ್ವಾಮಿ, ಉಪ ವ್ಯವಸ್ಥಾಪಕ ಬಿ.ಆರ್. ರವಿಕಿರಣ್, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಸುರೇಂದ್ರ ಗೌಡ, ನಿರ್ದೇಶಕರಾದ ಟಿ.ಎಂ. ನಾರಾಯಣಸ್ವಾಮಿ, ಟಿ.ವಿ. ಸುರೇಶ್, ಟಿ.ಎನ್. ಶ್ರೀನಿವಾಸ್, ಟಿ.ಎನ್. ಕೇಶವಮೂರ್ತಿ, ಟಿ.ಎಲ್. ಚಿಕ್ಕ ವೆಂಕಟಸ್ವಾಮಿ, ಟಿ.ಎಂ. ಮುನಿಕೃಷ್ಣಪ್ಪ, ಟಿ.ಕೆ. ಮುರಳಿ, ಶೋಭಾ, ರತ್ನಮ್ಮ, ಮುಖ್ಯ ಕಾರ್ಯನಿರ್ವಾಹಕ ಶಂಕರ್ ಟಿ.ಎನ್., ಹಾಲು ಪರೀಕ್ಷಕ ಟಿ.ಎನ್. ರಾಘವೇಂದ್ರ, ಸಹಾಯಕ ಟಿ.ಎಸ್. ನಂಜಪ್ಪ ಹಾಗೂ ಮುಖಂಡರಾದ ರಮೇಶ್, ಶ್ರೀಧರ್ ಮತ್ತು ಗ್ರಾಮಸ್ಥರು ಹಾಜರಿದ್ದರು.

For Daily Updates WhatsApp ‘HI’ to 7406303366

error: Content is protected !!
Exit mobile version